ಮುಂಬೈ,ಆ. 13 (DaijiworldNews/AK): ಖ್ಯಾತ ನಟ ನಟ ಧನುಷ್ ಮತ್ತು ನಟಿ ಮೃಣಾಲ್ ಠಾಕೂರ್ ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ವದಂತಿಗೆ ಮೃಣಾಲ್ ತೆರೆ ಎಳೆದಿದ್ದಾರೆ.

ಕೆಲ ದಿನಗಳಿಂದ ಮೃಣಾಲ್ ಜೊತೆಗೆ ಧನುಷ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿತ್ತು. ಆದ್ರೆ ಈ ಬಗ್ಗೆ ಧನುಷ್ ಆಗಲಿ, ನಟಿ ಆಗಲಿ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆದರೆ ಇದೀಗ ಮೃಣಾಲ್ ಠಾಕೂರ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ನಾನು ಮತ್ತು ಧನುಷ್ ಉತ್ತಮ ಸ್ನೇಹಿತರು. ನಮ್ಮಿಬ್ಬರ ಬಗ್ಗೆ ಬಹಳಷ್ಟು ಸುದ್ದಿಗಳು ಹರಿದಾಡುತ್ತಿವೆ ಅನ್ನೋದು ಗಮನಕ್ಕೆ ಬಂದಿದೆ. ಮೊದಲು ನೋಡಿದಾಗ ತಮಾಷೆಗೆ ಅಂದುಕೊಂಡಿದ್ದೆ. ‘ಸನ್ ಆಫ್ ಸರ್ದಾರ್ 2’ ಸಿನಿಮಾದ ಪ್ರೀಮಿಯರ್ಗೆ ಧನುಷ್ ಹಾಜರಾಗಿದ್ದರು. ಹಾಗಂದ ಮಾತ್ರಕ್ಕೆ ಯಾರೂ ಅದನ್ನ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಅಂದಹಾಗೆ, ಧನುಷ್ ಅವರನ್ನು ಅಜಯ್ ದೇವಗನ್ ಆಹ್ವಾನಿಸಿದ್ದರು ಎಂದು ಹೇಳಿದ್ದಾರೆ.