ಮುಂಬೈ, ಆ. 23 (DaijiworldNews/AK): ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಇನ್ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಿರುವ ಬೋಲ್ಡ್ ಫೋಟೋಗಳು ಭಾರೀ ಸದ್ದು ಮಾಡುತ್ತಿದೆ.

ವೆಕೇಷನ್ಗೆ ಹೋಗಿರುವ ಆಲಿಯಾ ಬೀಚ್ ಸೈಡ್ ತಂಪು ತಂಗಾಳಿಯಲ್ಲಿ ಹಾಯಾಗಿ ಸಮಯ ಕಳೆಯುತ್ತಿರುವುದು ಕಂಡುಬಂದಿದೆ. ಆದರೆ ಕಾಮೆಂಟ್ಸ್ ಸೆಕ್ಷನ್ನ್ನು ಆಫ್ ಮಾಡಿದ್ದಾರೆ ಆಲಿಯಾ. ಅವರು ಈ ರೀತಿ ಮಾಡಿರೋದು ಮೊದಲೇನಲ್ಲ. ಕೆಲವೊಂದು ವೈಯಕ್ತಿಕ ಫೋಟೋ ಹಾಕಿದಾಗ ಆಲಿಯಾ ಕಾಮೆಂಟ್ ಸೆಕ್ಷನ್ ಆಫ್ ಮಾಡುವ ಪದ್ಧತಿ ರೂಢಿಸಿಕೊಂಡಿದ್ದಾರೆ.
ಬ್ಯಾಡ್ ಕಾಮೆಂಟ್ಸ್ ಹಾಕಿ ಮನಸ್ಸಿಗೆ ನೋವು ಮಾಡಿಕೊಳ್ಳುವ ತಲೆನೋವ್ಯಾಕೆ ಅನ್ನೋದು ಆಲಿಯಾ ಪಾಲಿಸಿ ಇರಬಹುದು. ಹೀಗಾಗಿ ಈಗ ಪೋಸ್ಟ್ ಮಾಡಿರುವ ಆರೇಂಜ್ ಬಿಕಿನಿ ಧರಿಸಿರುವ ಬೋಲ್ಡ್ ಫೋಟೋಗಳಿಗೂ ಕಾಮೆಂಟ್ಸ್ ಆಫ್ ಮಾಡಿದ್ದಾರೆ.
ಮೇಕಪ್ ಇಲ್ಲದೇ ಸುಂದರವಾಗಿ ಕಾಣಿಸುವ ನಟಿಯರಲ್ಲಿ ಆಲಿಯಾ ಕೂಡ ಒಬ್ಬರು. ಅನೇಕ ಬಾರಿ ಮೇಕಪ್ ಇಲ್ಲದೇ ಕಾಣಿಸಿಕೊಳ್ಳೋದುಂಟು. ಇದೀಗ ತಮ್ಮ ನೈಸರ್ಗಿಕ ಅಂದಕ್ಕೆ ಚೆಂದದ ಕ್ಯಾಪ್ಷನ್ ಕೊಟ್ಟಿರುವ ಆಲಿಯಾ ಸಮುದ್ರದ ಉಪ್ಪು ಹಾಗೂ ಸಮುದ್ರದ ತಂಗಾಳಿ ತಮ್ಮ ಕೇಶವಿನ್ಯಾಸ ಮಾಡಿದೆ ಎಂದು ಕ್ರೆಡಿಟ್ ಕೊಟ್ಟಿದ್ದಾರೆ.