ಮುಂಬೈ, ಆ. 25 (DaijiworldNews/AA): ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಬಗ್ಗೆ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಪರಿಣಿತಿ ಚೋಪ್ರಾ ಅವರು, 1 + 1 = 3 ಎಂಬ ಬರಹದಲ್ಲಿ ಪುಟ್ಟ ಪಾದಗಳ ಚಿತ್ರ ಹಂಚಿಕೊಂಡಿದ್ದಾರೆ. ಜೊತೆಗೆ ನಮ್ಮ ಪುಟ್ಟ ಜಗತ್ತು ಬರುತ್ತಿದೆ ಎಂದು ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಹಾಗೂ ನಟಿ ಪರಿಣಿತಿ ಚೋಪ್ರಾ ಅವರ ವಿವಾಹ 2023ರಲ್ಲಿ ನಡೆದಿತ್ತು. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇನ್ನು ಪರಿಣಿತಿ ಚೋಪ್ರಾಗೆ ನಟಿಯರಾದ ಪ್ರಿಯಾಂಕಾ ಚೋಪ್ರಾ, ಕತ್ರೀನಾ ಕೈಫ್, ಸೋನಂ ಕಪೂರ್, ಸೇರಿದಂತೆ ಹಲವರು ಇನ್ಸ್ಸ್ಟಾಗ್ರಾಂನಲ್ಲಿನಲ್ಲೇ ಶುಭಾಶಯ ಕೋರಿದ್ದಾರೆ.