ಹೈದರಾಬಾದ್, ಅ. 04 (DaijiworldNews/AA): ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು 2026ರ ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅಕ್ಟೋಬರ್ 3ರಂದು ಗುಟ್ಟಾಗಿ ಹೈದರಾಬಾದ್ನ ದೇವರಕೊಂಡ ಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ ಇ ಬಗ್ಗೆ ರಶ್ಮಿಕಾ ಮಂದಣ್ಣ ಆಗಲಿ ವಿಜಯ್ ದೇವರಕೊಂಡ ಆಗಲಿ ಅಧಿಕೃತ ಹೇಳಿಕೆ ನೀಡಿಲ್ಲ.
ನಿಶ್ಚಿತಾರ್ಥವು ರಶ್ಮಿಕಾ ಹಾಗೂ ವಿಜಯ್ ಅವರ ಆಪ್ತ ಸ್ನೇಹಿತರು ಮತ್ತು ಎರಡು ಕುಟುಂಬಗಳ ಸಮ್ಮುಖದಲ್ಲಿ ಬಹಳ ಖಾಸಗಿಯಾಗಿ ನಡೆದಿದೆ. ಈ ವಿಷಯವನ್ನು ಗುಟ್ಟಾಗಿ ಇಡುವ ಕಾರಣದಿಂದಲೇ ಎಲ್ಲಿಯೂ ಫೋಟೋ ಲೀಕ್ ಆಗದಂತೆ ನೋಡಿಕೊಳ್ಳಲಾಗಿದೆ. ವಿಜಯ್ ಮತ್ತು ರಶ್ಮಿಕಾ ಶೀಘ್ರವೇ ಈ ಸುದ್ದಿಯನ್ನು ಅಧಿಕೃತಗೊಳಿಸಲಿದ್ದಾರೆ. ಇನ್ನು ನಿಶ್ಚಿತಾರ್ಥದ ವೇಳೆ ಮದುವೆ ಡೇಟ್ ಕೂಡ ನಿಗದಿ ಆಗಿದೆ ಎಂದು ವರದಿಯಾಗಿದೆ.
ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ. ಸೆಲೆಬ್ರಿಟಿ ಮದುವೆ ಆದ್ದರಿಂದ ಅದ್ದೂರಿಯಾಗಿ ಇದನ್ನು ನೆರವೇರಿಸಲು ನಿರ್ಧರಿಸಲಾಗಿದೆ. ಸಾಕಷ್ಟು ಸೆಲೆಬ್ರಿಟಿಗಳು ಈ ವಿವಾಹಕ್ಕೆ ಹಾಜರಾಗುವ ನಿರೀಕ್ಷೆ ಇದೆ.