ಬೆಂಗಳೂರು, ಅ. 05 (DaijiworldNews/AA): ಹಾಸ್ಯ ನಟ ಚಿಕ್ಕಣ್ಣ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿದ್ರು. ಹೂ ಮುಡಿಸುವ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಇತ್ತ 'ಜೋಡೆತ್ತು' ಸಿನಿಮಾ ಚಿತ್ರಕ್ಕೆ ಸಿದ್ಧತೆ ಮಾಡಿಕೊಂಡಿರುವ ಚಿಕ್ಕಣ್ಣ ಮತ್ತೊಂದೆಡೆ ಮದುವೆ ತಯಾರಿ ಕೂಡ ಆರಂಭಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಿನಿಮಾ ಚಿತ್ರೀಕರಣ ಮುಗಿಯುವ ವೇಳೆಗೆ ನನ್ನ ಮದುವೆ ಕೂಡ ಆಗಿರುತ್ತೆ ಎಂದಿದ್ದಾರೆ ಚಿಕ್ಕಣ್ಣ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಹುಡುಗಿ ಪಾವನಾರನ್ನ ಚಿಕ್ಕಣ್ಣ ಮದುವೆಯಾಗಲಿದ್ದು ಇದು ಅರೇಂಜ್ ಮ್ಯಾರೇಜ್ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, "ಶೀಘ್ರದಲ್ಲೇ ಮದುವೆಯ ದಿನಾಂಕ ನಿಗದಿಯಾಗಲಿದೆ. ಜೋಡೆತ್ತು ನಿರ್ಮಾಪಕರ ಕಾಲ್ಗುಣದಿಂದ ನಮಗೂ ಜೋಡೆತ್ತು ಸಿಕ್ಕಿದೆ. ಡೈರೆಕ್ಟರ್ ಕೂಡ ಮದುವೆಯಾದ್ರು. ಈಗ ನಾನು ಮದುವೆಯಾಗುತ್ತಿದ್ದೇನೆ. ಜೋಡೆತ್ತು ಸಿನಿಮಾ ಚಿತ್ರೀಕರಣದ ಮುಗಿಯೋ ವೇಳೆಗೆ ನನ್ನ ಮದುವೆಯೂ ಆಗಿರುತ್ತೆ" ಎಂದಿದ್ದಾರೆ.