ಮುಂಬೈ, ಅ. 06 (DaijiworldNews/AA): ನಟ, ನಿರ್ಮಾಪಕ ಮತ್ತು ನಿರ್ದೇಶಕ ಅರ್ಬಾಜ್ ಖಾನ್ ಅವರ ಎರಡನೇ ಪತ್ನಿ ಶುರಾ ಖಾನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ದೊಡ್ಡಪ್ಪನಾಗಿದ್ದಾರೆ.

ಶುರಾ ಖಾನ್ ಅವರನ್ನು ಅಕ್ಟೋಬರ್ ೪ರಂದು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಲ್ಮಾನ್ ಖಾನ್ ಕೂಡ ತಮ್ಮ ಕುಟುಂಬದೊಂದಿಗೆ ಸಂತೋಷದ ಸಂದರ್ಭವನ್ನು ಆಚರಿಸಲು ಪನ್ವೇಲ್ ಫಾರ್ಮ್ಹೌಸ್ನಿಂದ ಹಿಂತಿರುಗುತ್ತಿದ್ದಾರೆ.
ಈ ಬಗ್ಗೆ ಅರ್ಬಾಜ್ ಇನ್ನು ಅಧಿಕೃತ ಹೇಳಿಕೆಯನ್ನು ನೀಡಿಲ್ಲವಾದರೂ, ಶುರಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ಜೂನ್ನಲ್ಲಿ ತಮ್ಮ ಮನೆಗೆ ಹೊಸ ಸದಸ್ಯರ ಆಗಮನವಾಗುತ್ತಿರುವ ಬಗ್ಗೆ ಶುರಾ ಮತ್ತು ಅರ್ಬಾಜ್ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದರು.