ಮುಂಬೈ, ಅ. 14 (DaijiworldNews/AK):ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರು ಬಾಲ್ಯದ ಗೆಳೆಯ ಆ್ಯಂಟನಿ ಜೊತೆ 2024ರಲ್ಲಿ ಮದುವೆ ಆದರು. ಕೀರ್ತಿ ಸುರೇಶ್ ಸಂಪ್ರದಾಯಸ್ತ ಕುಟುಂಬಕ್ಕೆ ಸೇರಿದವರು. ಅವರು ಅನ್ಯ ಧರ್ಮದವನ ಜೊತೆ ವಿವಾಹ ಆಗುತ್ತಾರೆ ಎಂದಾಗ ಸಾಕಷ್ಟು ಚರ್ಚೆಗಳು ನಡೆದವು. ಮನೆಯಲ್ಲಿ ಕೂಡ ಈ ವಿಚಾರವಾಗಿ ತೊಂದರೆ ಎದುರಿಸಿದ ಬಗ್ಗೆ ಕೀರ್ತಿ ಸುರೇಶ್ ಹೇಳಿಕೊಂಡಿದ್ದಾರೆ.

ಕೀರ್ತಿ ಸುರೇಶ್ಗೆ ಈಗ 32 ವರ್ಷ. ಅವರು 15-16ನೇ ವಯಸ್ಸಿನಲ್ಲಿರುವಾಗಲೇ ಆ್ಯಂಟನಿ ಜೊತೆ ಪರಿಚಯ ಬೆಳೆಯಿತು. ಕಾಲೇಜಿನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತು. 2010ರಲ್ಲಿ ಇವರ ಪ್ರೀತಿ ಆರಂಭ ಆಯಿತಂತೆ. ಆಗ ಕೀರ್ತಿ ನಟಿ ಆಗುವ ಕನಸು ಹೊಂದಿರಲಿಲ್ಲ. ನಟಿಯಾದ ಬಳಿಕವೂ ಅವರು ತಮ್ಮ ಸಂಬಂಧವನ್ನು ಉಳಿಸಿಕೊಂಡು ಬಂದರು.
‘ನಮಗೆ ಸಮಯ ಬೇಕಿತ್ತು. ನಮ್ಮ ಕಾಲೇಜ್ನ ಮುಗಿಸಿ, ಕರಿಯರ್ನ ಗಟ್ಟಿ ಮಾಡಿಕೊಳ್ಳಬೇಕಿತ್ತು. ಐದರಿಂದ ಆರು ವರ್ಷ ನಾವಿಬ್ಬರೂ ಲಾಂಗ್ ಡಿಸ್ಟನ್ಸ್ ರಿಲೇಶನ್ಶಿಪ್ನಲ್ಲಿ ಇದ್ದೆವು. ಅವನು ಕತಾರ್ನಲ್ಲಿ ಇದ್ದ, ನಾನು ಚೆನ್ನೈನಲ್ಲಿದ್ದೆ. ಅವನು ಭಾರತಕ್ಕೆ ಮರಳಿದ. ಆಗ ನಮಗೆ ಸೆಟಲ್ ಆಗೋಕೆ ಸಮಯ ಬೇಕಿತ್ತು’ ಎಂದಿದ್ದಾರೆ ಕೀರ್ತಿ.
ಆ್ಯಂಟನಿ ಕ್ರಿಶ್ಚಿಯನ್. ಕೀರ್ತಿ ಹಿಂದು. ಈ ವಿಚಾರ ಮನೆಯಲ್ಲಿ ದೊಡ್ಡ ತೊಂದರೆ ಆಗಬಹುದು ಎಂಬುದು ಇವರ ಊಹೆ ಆಗಿತ್ತು. ಆದರೆ, ಹಾಗಾಗಲೇ ಇಲ್ಲ. ‘ಧರ್ಮ ಎಂಬುದು ಮನೆಯಲ್ಲಿ ದೊಡ್ಡ ಸಮಸ್ಯೆ ಆಗಬಹುದು ಎಂದು ನಾವು ಭಾವಿಸಿದ್ದೆವು. ನನ್ನ ತಂದೆ ಬಳಿ ಆ್ಯಂಟನಿ ಬಗ್ಗೆ ಹೇಳಿದೆ. ಆದರೆ, ಧರ್ಮದ ವಿಚಾರವನ್ನು ಅವರು ಅಷ್ಟು ಗಂಭೀರವಾಗಿ ಸ್ವೀಕರಿಸಲೇ ಇಲ್ಲ. ನಾವು ಕಲ್ಪಿಸಿಕೊಂಡಂತೆ ಏನೂ ಆಗಿರಲಿಲ್ಲ ಎಂದಿದ್ದಾರೆ ಕೀರ್ತಿ ಸುರೇಶ್.