ಬೆಂಗಳೂರು, ಅ. 15 (DaijiworldNews/AA): ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಅವರು ಗ್ರಾö್ಯಮಿ-ನಾಮನಿರ್ದೇಶಿತ ಖ್ಯಾತ ಗಾಯಕಿ, ಕೊಳಲು ವಾದಕಿ ವಾರಿಜಶ್ರೀ ವೇಣುಗೋಪಾಲ್ ಅವರೊಂದಿಗೆ ಎರಡನೇ ಮದುವೆ ಸಜ್ಜಾಗಿದ್ದಾರೆ.

ರಘು ದೀಕ್ಷಿತ್ ಹಾಗೂ ವಾರಿಜಶ್ರೀ ಹಲವು ಆಲ್ಬಂಗಳಲ್ಲಿ ಜೊತೆಯಾಗಿ ಹಾಡಿದ್ದು, ಒಬ್ಬರಿಗೊಬ್ಬರು ಪರಸ್ಪರ ಪರಿಚಿತರು. ಅನೇಕ ವರ್ಷಗಳಿಂದ ಪರಸ್ಪರ ಪರಿಚಿತರಾಗಿರುವ ಇವರಿಬ್ಬರು, ಇದೀಗ ವಿವಾಹವಾಗಲು ನಿರ್ಧರಿಸಿದ್ದಾರೆ. ಇದೇ ತಿಂಗಳು ಕೊನೆಯಲ್ಲಿ ಮದುವೆ ನಿಶ್ಚಯವಾಗಿದೆ.
ರಘು ದೀಕ್ಷಿತ್ ಅವರಿಗೆ ಇದು ಎರಡನೇ ವಿವಾಹ. ಈ ಹಿಂದೆ ಶಾಸ್ತ್ರೀಯ ನೃತ್ಯಗಾರ್ತಿ ಮಯೂರಿ ಅವರು ರಘು ಧೀಕ್ಷಿತ್ ವಿವಾಹವಾಗಿದ್ದರು. ಆದರೆ ಇವರಿಬ್ಬರು 2019ರಲ್ಲಿ ವಿಚ್ಛೇಧನ ಪಡೆದಿದ್ದರು.