ಮುಂಬೈ, ಅ. 22 (DaijiworldNews/ AK): ಬಾಲಿವುಡ್ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ದಂಪತಿಯ ಮುದ್ದು ಮಗಳ ಹೆಸರು ದುವಾ. ಮಗು ಜನಿಸಿ ಒಂದು ವರ್ಷ ಕಳೆದಿದೆ. ಆದರೆ ಇದುವರೆಗೂ ಮಗುವಿನ ಮುಖವನ್ನ ದಂಪತಿ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ.

ಇದೀಗ ಪ್ರಥಮ ಬಾರಿ ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿ ಪೋಸ್ಟ್ ಹಾಕುವ ಮೂಲಕ ಮಗಳ ಫೋಟೋವನ್ನ ರಿವೀಲ್ ಮಾಡಿದ್ದಾರೆ.
ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ದೀಪಿಕಾ ಅಮ್ಮನಾದ ಬಳಿಕ ಕೆಲಸದ ಸಮಯ ಕಡಿತ ಮಾಡುವ ವಿಚಾರಕ್ಕೆ ಮನವಿ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ದೀಪಿಕಾ ಪಡುಕೋಣೆ ದೀಪಾವಳಿ ಹಬ್ಬದ ದಿನ ಮನೆಯಲ್ಲಿ ಪೂಜೆ ಮಾಡುವ ಫೋಟೋದೊಂದಿಗೆ ಮುದ್ದು ಮಗಳ ಮುಖವನ್ನ ಜಗತ್ತಿಗೆ ಪರಿಚಯಿಸಿದ್ದಾರೆ. ರಣ್ವೀರ್ ಸಿಂಗ್, ದೀಪಿಕಾ ಹಾಗೂ ದುವಾ ಕ್ಯಾಂಡಿಡ್ ಫೋಟೋದಲ್ಲಿ ಮಿಂಚಿದ್ದಾರೆ. ಅಮ್ಮ ದೀಪಿಕಾ ಹಾಗೂ ಮಗಳು ದುವಾ ಟ್ವಿನ್ನಿಂಗ್ ಕೆಂಪು ಬಣ್ಣದ ಸಲ್ವಾರ್ ಧರಿಸಿದ್ದಾರೆ.