ಬೆಂಗಳೂರು, ನ. 07 (DaijiworldNews/AK): ತನ್ನ ಹೆಸರಿನಲ್ಲಿ ಕರೆ ಹಾಗೂ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಕಾಂತಾರ ಚಿತ್ರ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಕರೆ ಮಾಡುತ್ತಿರುವ ಸಂಖ್ಯೆಯನ್ನೂ ಬಹಿರಂಗವಾಗಿ ಪೋಸ್ಟ್ ಮಾಡಿರುವ ರುಕ್ಮಿಣಿ, ನನ್ನ ಹೆಸರಿನಲ್ಲಿ ನಕಲಿ ಕರೆ ಮತ್ತು ಮೆಸೇಜ್ ಮಾಡುತ್ತಿದ್ದಾರೆ. ಅದಕ್ಕೆ ಉತ್ತರಿಸಬೇಡಿ ಎಂದು ಮನವಿ ಮಾಡಿದ್ದಾರೆ.
ನನ್ನ ಹೆಸರಿನಲ್ಲಿ 9445893273 ಸಂಖ್ಯೆಯಿಂದ ಇತರರಿಗೆ ಕರೆ ಮತ್ತು ಮೆಸೇಜ್ ಮಾಡಲಾಗುತ್ತಿದೆ. ಈ ಮೊಬೈಲ್ ಸಂಖ್ಯೆಯಿಂದ ಬರುವ ಕರೆ ಅಥವಾ ಸಂದೇಶಕ್ಕೆ ಪ್ರತಿಕ್ರಿಯೆ ನೀಡಬೇಡಿ ಎಂದು ಕೇಳಿಕೊಂಡಿದ್ದಾರೆ.