ಮುಂಬೈ, ನ. 08 (DaijiworldNews/AK): ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಡೇಟಿಂಗ್ನಲ್ಲಿದ್ದಾರೆ . ಅಲ್ಲದೇ ಇಬ್ಬರೂ ಎಂಗೇಜ್ ಆಗಿದ್ದಾರೆ ಎಂಬ ವದಂತಿ ಹಲವು ಸಮಯದಿಂದ ಸುದ್ದಿಯಲ್ಲಿತ್ತು.

2026ರ ಫೆಬ್ರವರಿಯಲ್ಲೇ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ಉದಯಪುರದ ಅರಮನೆಯಲ್ಲಿ ಮದುವೆ ನಡೆಯಲಿದೆ ಎಂಬೆಲ್ಲ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇತ್ತು. ಇದೀಗ ಎಲ್ಲ ವದಂತಿಗಳಿಗೆ ನಟಿ ರಶ್ಮಿಕಾ ತೆರೆ ಎಳೆದಿದ್ದಾರೆ.
Honest Townhall ವಾನಿಯ ಸಂದರ್ಶನದಲ್ಲಿ ಮಾತನಾಡಿರುವ ನಟಿ, ವಿಜಯ್ ದೇವರಕೊಂಡ ಅವರನ್ನ ಮದುವೆ ಆಗುವುದಾಗಿ ಸ್ಪಷ್ಟನೆ ಕೊಟ್ಟಿದ್ದಾರೆ. ಫ್ಯಾನ್ಸ್ವೊಬ್ಬರು ಕೇಳಿದ ಪ್ರಶ್ನೆಗೆ ಮುಗುಳುನಕ್ಕ ನಟಿ ನೇರವಾಗಿ ಉತ್ತರಿಸಿದ್ದಾರೆ. ಆ ರೂಮರ್ಸ್ ಎಲ್ಲರಿಗೂ ಗೊತ್ತಿದೆ, ಅದು ಸತ್ಯ ಎಂದಿದ್ದಾರೆ. ಇದೇ ವೇಳೆ ಮದುವೆ ಆಗೋದಾದ್ರೆ ಯಾರನ್ನ ಆಗ್ತೀರಾ ಎಂಬ ಫ್ಯಾನ್ ಪ್ರಶ್ನೆಗೆ ಹಿಂದೆ ಮುಂದೆ ಯೋಚನೆ ಮಾಡದೇ ವಿಜಯ್ನ ಮದುವೆ ಆಗ್ತೀನಿ ಎಂದಿದ್ದಾರೆ.
ಇದಕ್ಕೂ ಮುನ್ನ ಸಂದರ್ಶನದಲ್ಲಿ ಮಾತನಾಡಿದ ನಟಿ ಬಾಳ ಸಂಗಾತಿ ಹೇಗಿರಬೇಕು ಅಂತ ಹೇಳಿದರು. ನನಗಾಗಿ ಯುದ್ಧವನ್ನೇ ಮಾಡಬಲ್ಲ, ಇಡೀ ಜಗತ್ತೇ ನನ್ನ ವಿರುದ್ಧ ತಿರುಗಿಬಿದ್ದಾಗ ನನ್ನೊಂದಿಗೆ ನಿಲ್ಲಬಲ್ಲ ಜೀವನ ಸಂಗಾತಿ ಬೇಕು ಎಂದು ರಶ್ಮಿಕಾ ಹೇಳಿಕೊಂಡರು.