ಬೆಂಗಳೂರು, ನ. 10 (DaijiworldNews/AA): 'ಅಮೃತವರ್ಷಿಣಿ' ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ್ದ ನಟಿ ರಜಿನಿ ಇದೀಗ ಸದ್ದಿಲ್ಲದೆ ಜಿಮ್ ಟ್ರೇನರ್ ಅರುಣ್ ವೆಂಕಟೇಶ್ ಜೊತೆ ಹಸೆಮಣೆ ಏರಿದ್ದಾರೆ.

ರಜಿನಿ ಅವರು 'ಅಮೃತವರ್ಷಿಣಿ', 'ಹಿಟ್ಲರ್ ಕಲ್ಯಾಣ'ದಂತಹ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದು, ಕೆಲವು ಶೋಗಳನ್ನು ನಿರೂಪಿಸಿದ್ದಾರೆ ಕೂಡ.
ಇತ್ತೀಚೆಗೆ ಅವರು ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳುತ್ತಾ ಇರಲಿಲ್ಲ. ಇನ್ಸ್ಟಾಗ್ರಾಮ್ ನಲ್ಲಿ ಅರುಣ್ ವೆಂಕಟೇಶ್ ಅವರೊಂದಿಗೆ ರೀಲ್ಸ್ಗಳನ್ನು ಮಾಡುತ್ತಿದ್ದರು. ಇವರಿಬ್ಬರ ವಿಡಿಯೋಗಳು ಸಾಕಷ್ಟು ಫೇಮಸ್ ಆಗಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದಾಗ 'ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್. ಬೆಸ್ಟ್ ಫ್ರೆಂಡ್ನ ಮದುವೆ ಆದರೂ ತಪ್ಪೇನು ಇಲ್ವಲ್ಲ' ಎಂದಿದ್ದರು ರಜಿನಿ.
ಇಂದು ರಜಿನಿ ಹಾಗೂ ಅರುಣ್ ವೆಂಕಟೇಶ್ ವಿವಾಹ ನೆರವೇರಿದೆ. ಕೇವಲ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಈ ಮದುವೆ ಶಾಸ್ತ್ರ ನಡೆದಿದೆ. ದಂಪತಿಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.