ಮುಂಬೈ, ನ. 12 (DaijiworldNews/AA): ಬಹುಬಾಷಾ ಗಾಯಕಿ ಪಲಕ್ ಮುಚ್ಚಲ್ ಕೇವಲ ಹಾಡಿನಿಂದ ಮಾತ್ರವಲ್ಲದೇ ತಮ್ಮ ಜನಪರ ಕಾರ್ಯಗಳಿಂದಲೂ ಜನರ ಮನಸ್ಸು ಗೆದ್ದಿದ್ದಾರೆ. ಅವರು ಈವರೆಗೆ ಸುಮಾರು 3,800 ಬಡಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವಾಗುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.

'ಪಲಕ್ ಪಲಾಶ್ ಚಾರಿಟೆಬಲ್ ಫೌಂಡೇಶನ್' ಮೂಲಕ ಪಲಕ್ ಮುಚ್ಚಲ್ ಅವರು ಸಾವಿರ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ್ದಾರೆ. ಭಾರತದ ಹಾಗೂ ವಿದೇಶದಲ್ಲಿ ಇರುವ ಬಡ ಮಕ್ಕಳ ಹಾರ್ಟ್ ಸರ್ಜಿರಿಗೆ ಅವರು ನೆರವಾಗಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಅವರು ಪಲಕ್ ಮುಚ್ಚಲ್ ಅವರು ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.
ಈವರೆಗೂ ಪಲಕ್ ಅವರು ಒಟ್ಟು 3,800 ಬಡ ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಲು ನೆರವಾಗಿದ್ದಾರೆ. ಈ ಮೂಲಕ 'ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್' ಹಾಗೂ 'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್' ಪುಟಗಳಲ್ಲಿ ಪಲಕ್ ಮುಚ್ಚಲ್ ಅವರ ಹೆಸರು ಸೇರ್ಪಡೆಯಾಗಿದೆ.
ಹಿಂದಿ, ಕನ್ನಡ, ಬೆಂಗಾಲಿ, ತೆಲುಗು, ತಮಿಳು, ಮರಾಠಿ, ಗುಜರಾತಿ ಮುಂತಾದ ಭಾಷೆಗಳಲ್ಲಿ ಪಲಕ್ ಮುಚ್ಚಲ್ ಹಾಡಿದ್ದಾರೆ. ಜೊತೆಗೆ ಅವರು ದೇಶ ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾರೆ. ಅದರಿಂದ ಬರುವ ಹಣವನ್ನು ಅವರು ಬಡಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗಾಗಿ ಮೀಸಲಿಡುತ್ತಾರೆ.
ಇಷ್ಟು ಮಾತ್ರವಲ್ಲದೆ ಪಲಕ್ ಅವರು, ಕಾರ್ಗಿಲ್ ಹುತಾತ್ಮರ ಕುಟುಂಬಗಳಿಗೆ ಕೂಡ ಅವರು ಸಹಾಯ ಮಾಡಿದ್ದಾರೆ. ಗುಜರಾತ್ ಭೂಕಂಪ ಸಂತ್ರಸ್ತರ ನೆರವಿಗಾಗಿ ಅವರು 10 ಲಕ್ಷ ರೂಪಾಯಿ ನೀಡಿದ್ದರು.