ಚೆನ್ನೈ, ನ. 18 (DaijiworldNews/AK):ಬಹುಭಾಷಾ ಖ್ಯಾತ ನಟಿ ಮೀರಾ ವಸುದೇವನ್ ಇದೀಗ ಮೂರನೇ ಮದುವೆಯಿಂದಲೂ ವಿಚ್ಛೇದನ ಪಡೆದು ಸುದ್ದಿಯಾಗಿದ್ದಾರೆ. ಮೋಹನ್ಲಾಲ್ ಜೊತೆ `ತನ್ಮಾತ್ರ’ ಚಿತ್ರದಲ್ಲಿ ನಟಿಸಿದ್ದ ಖ್ಯಾತ ಮಲಯಾಳಂ ನಟಿ ಮೀರಾ ವಸುದೇವನ್ ಇದೀಗ ಮೂರನೇ ಪತಿಯಿಂದ ದೂರಾಗಿರುವ ಅಧಿಕೃತ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ.

2024ರಲ್ಲಿ ಇವರು ಸಿನಿಮಾಟೋಗ್ರಾಫರ್ ವಿಪಿನ್ ಪುತಿಯಂಕಂ ಜೊತೆ ವಿವಾಹವಾಗಿದ್ದರು. 2025ರಲ್ಲೇ ವಿಚ್ಛೇದನ ಪಡೆದು ಈಗ ಸಿಂಗಲ್ ಆಗಿರುವುದಾಗಿ ಪೋಸ್ಟ್ ಹಾಕಿದ್ದಾರೆ.
ಕನ್ನಡ ಹೊರತಾಗಿ ಮಲಯಾಳಂ, ಹಿಂದಿ, ತಮಿಳು, ತೆಲುಗು ಚಿತ್ರದಲ್ಲಿ ನಟಿಸಿದ್ದ ಮೀರಾ ವಸುದೇವನ್ 2005ರಲ್ಲಿ ವಿಶಾಲ್ ಅಗರವಾಲ್ ಎಂಬುವರನ್ನ ಮದುವೆಯಾಗಿದ್ದರು. 2010ರಲ್ಲಿ ಮದುವೆ ಮುರಿದುಬಿತ್ತು. ಬಳಿಕ 2021ರಲ್ಲಿ ಮಲಯಾಳಂ ನಟ ಜಾನ್ ಕೊಕ್ಕೇನ್ ಜೊತೆ ಮೀರಾ ಎರಡನೇ ವಿವಾಹ ಜರುಗಿತ್ತು. ಈ ದಾಂಪತ್ಯದಲ್ಲಿ ಓರ್ವ ಪುತ್ರನಿಗೂ ಜನ್ಮ ನೀಡಿದ್ದ ಮೀರಾ ವಸುದೇವನ್ 2024ರಲ್ಲಿ ವಿಪಿನ್ ಪುತಿಯಂಕಮ್ ಜೊತೆ ಮದುವೆಯಾಗಿದ್ದರು. ಇದೀಗ ಮೂರನೇ ಮದುವೆಯ ಬಂಧನದಿಂದಲೂ ಹೊರ ಬಂದಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ.