ಬೆಂಗಳೂರು, ನ. 19 (DaijiworldNews/AA): ಹಿಂದೆ ತಾವಿದ್ದ ರಿಲೇಷನ್ನಲ್ಲಿ ಹೇರಿಕೆ ಇತ್ತು, ನನ್ನ ತನಕ್ಕೆ ಅವಕಾಶ ಇರಲಿಲ್ಲ. ನನಗೆ ಆಯ್ಕೆಗಳೇ ಇರಲಿಲ್ಲ ಎಂದು ನಟಿ ರಶ್ಮಿಕಾ ಮಂದಣ್ಣ ಮಾಜಿ ಪ್ರೇಮಿಯ ಬಗ್ಗೆ ದೂರು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, "ನೀವು ಯಾರೊಂದಿಗೆ ಇರಬೇಕು ಎಂಬುದನ್ನು ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳಿ. ಒಮ್ಮೊಮ್ಮೆ ಎಂಥಹಾ ಸನ್ನಿವೇಶದಲ್ಲಿ ಸಿಲುಕಿಕೊಳ್ಳುತ್ತೀರಿ ಎಂದರೆ ಅಲ್ಲಿ ನಿಮಗೆ ಬೇರೆ ಆಯ್ಕೆ, ಅವಕಾಶಗಳಿಗೆ ಜಾಗವೇ ಇರದಂತೆ ಆಗಿಬಿಡುತ್ತದೆ. ನಾನು ಹಿಂದೊಮ್ಮೆ ಇಂಥಹಾ ರಿಲೇಷನ್ನಲ್ಲಿ ಇದ್ದೆ. ಆದರೆ ಈಗ ನಾನು ಒಬ್ಬ ಪಾರ್ಟನರ್ ಜೊತೆಗೆ ಇದ್ದೇನೆ, ಇಲ್ಲಿ ನನಗೆ ಆಯ್ಕೆಗಳಿವೆ, ನನ್ನತನಕ್ಕೆ ಅವಕಾಶ ಇದೆ, ಇಲ್ಲಿ ನಾನು ಖುಷಿಯಾಗಿದ್ದೇನೆ, ಆತ ಖುಷಿಯಾಗಿದ್ದೇನೆ. ನಮ್ಮ ಸುತ್ತ ಇರುವವರೂ ಸಹ ಖುಷಿಯಾಗಿದ್ದಾರೆ" ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಸಹ ತಮ್ಮ ಈ ಹಿಂದಿನ ರಿಲೇಶನ್ಷಿಪ್ ಕೆಟ್ಟದಾಗಿ ಇತ್ತು, ಏಕಮುಖವಾಗಿತ್ತು ಎಂದು ಹೇಳಿದ್ದರು. ಆದರೆ ಅದು ಯಾರೊಂದಿಗಿನ ರಿಲೇಶನ್ಷಿಪ್ ಎಂದು ರಶ್ಮಿಕಾ ಮಂದಣ್ಣ ಬಹಿರಂಗಪಡಿಸಿರಲಿಲ್ಲ.