ಮುಂಬೈ, ನ. 19 (DaijiworldNews/AK): ಬಾಲಿವುಡ್ನ ಖ್ಯಾತ ನಟಿ ಸೋನಂ ಕಪೂರ್ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪಿಂಕ್ ಡ್ರೆಸ್ ಧರಿಸಿ ನಟಿ ಲೇಡಿ ಬಾಸ್ ಲುಕ್ನಲ್ಲಿ 2ನೇ ಬಾರಿ ತಾಯ್ತನ ಆಗುತ್ತಿರುವ ಸುದ್ದಿಯನ್ನ ಹಂಚಿಕೊಂಡಿದ್ದಾರೆ.

ಸೋನಂ ಕಪೂರ್ 2ನೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರ ಚರ್ಚೆಯಾಗಿತ್ತು. ಸೋನಂ ವರ್ತನೆಯೂ ಅವರು ಗರ್ಭಿಣಿ ಅನ್ನೋದನ್ನ ತೋರಿಸುತ್ತಿತ್ತು. ಆದರೂ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ಟೀವ್ ಇರುವ ಸೋನಂ ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರ ಬಹಿರಂಗಪಡಿಸಿರಲಿಲ್ಲ.
ಇದೀಗ ಹೊಸ ಫೋಟೋ ಶೂಟ್ನಲ್ಲಿ ಬೇಬಿಬಂಪ್ ಪ್ರದರ್ಶಿಸಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.’ಮದರ್’ ಎಂದಷ್ಟೇ ಹೇಳಿಕೊಂಡಿದ್ದಾರೆ. ಮತ್ತೆ ಅಮ್ಮನಾಗ್ತಿರುವ ಸೋನಂಗೆ ಕಾಮೆಂಟ್ ಮೂಲಕ ಅನೇಕರು ಶುಭ ಹಾರೈಸಿದ್ದಾರೆ.