ಥೈಲ್ಯಾಂಡ್, ನ. 21 (DaijiworldNews/AA): ಮೆಕ್ಸಿಕೋದ ಫಾತಿಮಾ ಬಾಷ್ ಅವರು 2025ನೇ ಸಾಲಿನ ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಫಾತಿಮಾ ಅವರು ಮೆಕ್ಸಿಕೊದ ಟಬಾಸ್ಕೋದವರು. ಟಬಾಸ್ಕೋ ಪ್ರತಿನಿಧಿಸಿ 'ಮಿಸ್ ಯೂನಿವರ್ಸ್ ಮೆಕ್ಸಿಕೊ' ಗೆದ್ದ ಮೊದಲಿಗರಾಗಿದ್ದಾರೆ. ಈಗ ಮಿಸ್ ಯೂನಿವರ್ಸ್ ಕಿರೀಟ ಕೂಡ ಧರಿಸಿದ್ದಾರೆ. 2000ನೇ ವರ್ಷದಲ್ಲಿ ಜನಿಸಿದ ಅವರು ಫ್ಯಾಷನ್ ಡಿಸೈನ್ ಓದಿದ್ದಾರೆ.
ಫಿನಾಲೆಗು ಮುನ್ನ ಫಾತಿಮಾ ಹೋಟೆಲ್ನಲ್ಲಿ ಇದ್ದರು. ಈ ವೇಳೆ ಒಡೆದ ಗಾಜಿನ ಮೇಲೆ ಕಾಲಿಟ್ಟರು. ಇದರಿಂದಾಗಿ ಅವರ ಪಾದಕ್ಕೆ ಗಾಜಿನ ಚೂರು ಚುಚ್ಚಿತ್ತು. ಈ ವೇಳೆ ವೈದ್ಯಕೀಯ ಚಿಕಿತ್ಸೆಗೆ ಸಮಯ ಇರಲಿಲ್ಲ. ಗಾಯ, ವಿವಾದ ಮತ್ತು ಭಾರೀ ಸ್ಪರ್ಧೆಯ ನಡುವೆಯೂ ಫಾತಿಮಾ ಬಾಷ್ ವಿನ್ನರ್ ಆಗಿ ಹೊರಹೊಮ್ಮಿದರು.
ಮಿಸ್ ಥೈಲ್ಯಾಂಡ್ ಮೊದಲ ರನ್ನರ್ ಅಪ್ ಆಗಿ ಮತ್ತು ಮಿಸ್ ವೆನೆಜುವೆಲಾ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಮಿಸ್ ಫಿಲಿಪೈನ್ಸ್ ಮತ್ತು ಮಿಸ್ ಕೋಟ್ ಡಿ'ಐವರಿ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನ ಗಳಿಸಿದರು. ಇನ್ನು ಭಾರತವನ್ನು ಪ್ರತಿನಿಧಿಸಿದ್ದ ಮಾಣಿಕಾ ವಿಶ್ವಕರ್ಮ ಅವರು ಟಾಪ್ 12 ಸುತ್ತಿಗೆ ಆಯ್ಕೆಯಾಗಲು ವಿಫಲರಾದರು.