ಮುಂಬೈ, ನ. 23 (DaijiworldNews/AK): ನಟಿ ಶ್ರೀಲೀಲಾ ತಮ್ಮ ಗೆಳೆಯನ ಹುಟ್ಟುಹಬ್ಬವನ್ನು ಸಂತೋಷದಿಂದ ಆಚರಿಸಿದ್ದಾರೆ. ಕನ್ನಡದ ಕಿಸ್ ಬೆಡಗಿ ಶ್ರೀಲೀಲಾ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಪ್ರೀತಿಯಲ್ಲಿ ಬಿದ್ದ ವಿಚಾರ ಸುದ್ದಿಯಾಗಿತ್ತು. ಈಗ ಇದಕ್ಕೆ ಸಾಕ್ಷಿ ಎನ್ನುವಂತೆ ಮುಂಬೈನಲ್ಲಿ ಶ್ರೀಲೀಲಾ ಅಭಿಮಾನಿಗಳ ಜೊತೆ ಕಾರ್ತಿಕ್ ಆರ್ಯನ್ ಹುಟ್ಟುಹಬ್ಬ ಆಚರಿಸಿಕೊಳ್ಳುವ ವೇಳೆ ಹಾಜರಿದ್ದರು.

ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ `ಆಶಿಕಿ 3′ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಬಳಿಕ ಇಬ್ಬರ ನಡುವೆ ಪ್ರೀತಿಯ ವದಂತಿ ಹುಟ್ಟಿಕೊಂಡಿತ್ತು.
ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಟ್ವಿನ್ ಕಲರ್ ಡ್ರೆಸ್ ಧರಿಸಿದ್ದರು. ಬ್ಲರ್ ಆಗಿರುವ ಫೋಟೋವನ್ನು ಇನ್ಸ್ಟಾದಲ್ಲಿ ಅಪ್ಲೋಡ್ ಮಾಡಿರುವ ಶ್ರೀಲೀಲಾ ʼಹ್ಯಾಪಿ ಬರ್ತ್ಡೇ ಸ್ಟೀಟೆಸ್ಟ್ʼ ಎಂದು ಶುಭ ಕೋರಿದ್ದಾರೆ.