ಬೆಂಗಳೂರು, ನ. 26 (DaijiworldNews/TA): ರಾಕಿಂಗ್ ಸ್ಟಾರ್ ಯಶ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಟಾಕ್ಸಿಕ್ ಚಿತ್ರದ ಹೊಸ ಅಪ್ಡೇಟ್ ಇನ್ನೂ ಬಹಿರಂಗವಾಗಿಲ್ಲ. ಸಿನಿಮಾ ತಂಡದಿಂದ ಯಾವುದೇ ಅಧಿಕೃತ ಫೋಟೋ ಅಥವಾ ಸುದ್ದಿ ಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಓರಿಜಿನಲ್ ಫೋಟೋ ತರಹ ಕಾಣುವ ಒಂದು ಚಿತ್ರ ವೈರಲ್ ಆಗಿದ್ದು, ಇದನ್ನು ಅಭಿಮಾನಿಗಳು ಎಐ ಮೂಲಕ ಸೃಷ್ಟಿಸಿರುವುದು ದೃಢವಾಗಿದೆ.

ಈ ಫೋಟೋದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಂತೆ ಕಾಣುತ್ತಿದ್ದಾರೆ, ಯಶ್ ಅವರೊಂದಿಗೆ ರೋಮ್ಯಾಂಟಿಕ್ ಮೂಡ್ ಮೂಡಿಸುತ್ತಿದ್ದಾರೆ. ಚಿತ್ರ ತಂಡದ ಸದಸ್ಯರು ಸುತ್ತಮುತ್ತಲೂ ನಿಂತಿರುವ ದೃಶ್ಯವನ್ನು ಹಿಡಿದಂತೆ ತೋರಿಸುತ್ತದೆ. ಮುಂಬೈ ಶೂಟಿಂಗ್ ಪ್ರಕ್ರಿಯೆ ಸಂಪೂರ್ಣವಾಗಿದ್ದು, ಕೊನೆ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಇತ್ತೀಚಿನ ಅಪ್ಡೇಟ್ ಪ್ರಕಾರ, ಟಾಕ್ಸಿಕ್ ಚಿತ್ರದ ಇನ್ನೂ ಯಾವುದೇ ಹೊಸ ಮಾಹಿತಿ ಪ್ರಕಟವಾಗಿಲ್ಲ.
ಟಾಕ್ಸಿಕ್ ಸಿನಿಮಾ ಮಾರ್ಚ್ 19, 2026 ರಂದು ತೆರೆ ಮೇಲೆ ಬರಲಿದೆ. ಈ ಚಿತ್ರವನ್ನು ಗೀತು ಮೋಹನದಾಸ್ ನಿರ್ದೇಶಿಸಿದ್ದಾರೆ ಮತ್ತು ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಟಾಕ್ಸಿಕ್ ಒಂದು ಆಕ್ಷನ್–ಥ್ರಿಲ್ಲರ್ ಸಿನಿಮಾ. ಯಶ್ ಹಾಲಿವುಡ್ ಮಾರುಕಟ್ಟೆಯಲ್ಲಿಯೂ ಹೆಸರು ಮಾಡಲಿದ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತಯಾರಾಗುತ್ತಿದೆ. ಬೇರೆ ಭಾಷೆಗಳಲ್ಲಿ ಡಬ್ ಆಗುವ ನಿರೀಕ್ಷೆ ಇದೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಚಿತ್ರದ ಬಗೆಗಿನ ಉತ್ಸಾಹ ಎಐ ಮೂಲಕ ಮೂಡಿಬರುತ್ತಿದೆ.