ಮುಂಬೈ,ನ. 28 (DaijiworldNews/ AK): ಬಾಲಿವುಡ್ ತಾರಾಜೋಡಿ ಕಿಯಾರಾ ಅಡ್ವಾನಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ತಮ್ಮ ಪುತ್ರಿಯ ಹೆಸರನ್ನು ಇದೀಗ ರಿವೀಲ್ ಮಾಡಿದ್ದಾರೆ.

ಪುತ್ರಿಗೆ `ಸರಾಯಾ’ ಎಂದು ಹೆಸರಿಟ್ಟಿದ್ದು, ಮಗಳ ಹೆಸರನ್ನು ಸ್ಟಾರ್ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕಳೆದ ಜುಲೈ 16ರಂದು ಕಿಯಾರಾ ಹಾಗೂ ಸಿದ್ಧಾರ್ಥ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಇದುವರೆಗೂ ಮಗಳ ಮುಖವನ್ನ ಕ್ಯಾಮೆರಾ ಮುಂದೆ ತೋರಿಸಿಲ್ಲ. ಇದೀಗ ತಮ್ಮ ಮಗಳಿಗೆ ಸಾಂಪ್ರದಾಯಿಕ ಹೆಸರನ್ನಿಟ್ಟು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.