ಮಂಗಳೂರು, ನ. 30 (DaijiworldNews/TA): ಸಿಂಪಲ್ ಸುನಿ ನಿರ್ದೇಶನದ, ಸೇರ್ವೇಗಾರ ಸಿಲ್ವರ್ ಸ್ಕ್ರೀನ್ಸ್ ಹಾಗೂ ಸುನಿ ಸಿನಿಮಾಸ್ ಸಂಸ್ಥೆ ನಿರ್ಮಾಣದ "ಗತವೈಭವ' ಕನ್ನಡ ಚಲನಚಿತ್ರ ಈಗಾಗಲೇ, ನವೆಂಬರ್ 14ರಂದು ಬಿಡುಗಡೆಗೊಂಡಿದ್ದು ಇದರ ಮೂರನೇ ವಾರದ ಮೊದಲ ಸಿನಿಮಾ ಮಂಗಳೂರಿನ ಬಿಗ್ ಸಿನಿಮಾ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಂಡಿತು.


ಸಿನಿಮಾ ವೀಕ್ಷಣೆಗೆ ಚಿತ್ರ ನಟ ದುಷ್ಯಂತ್ ಮತ್ತು ನಟಿ ಆಶಿಕಾ ರಂಗನಾಥ್ ಬಂದಿದ್ದು ಚಿತ್ರಕ್ಕೆ ಮಂಗಳೂರಿನ ಪ್ರೇಕ್ಷಕರು ನೀಡುವ ಪ್ರೋತ್ಸಹವನ್ನು ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನೂ ಸಿಂಪಲ್ ಸುನಿಯವರ ಈ ಚಿತ್ರವು ಪ್ರೇಮಕಥೆ ಹಾಗೂ ಫ್ಯಾಂಟಸಿ ಅಂಶಗಳನ್ನು ಒಳಗೊಂಡಿದ್ದು, ನಾಲ್ಕು ಜನ್ಮಗಳ ಕಥೆಯನ್ನು ಹೇಳುತ್ತದೆ. ಅಧ್ಬುತ ಕಲಾವಿದರನ್ನೊಳಗೊಂಡ ಈ ಚಿತ್ರಕ್ಕೆ ಮಂಗಳೂರಿಗರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.