ಬೆಂಗಳೂರು,ಡಿ. 01 (DaijiworldNews/TA): ಟಾಲಿವುಡ್ ಸ್ಟಾರ್ ನಟಿ ಸಮಂತಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವರದಿಗಳ ಪ್ರಕಾರ, ಬಾಲಿವುಡ್ ನಿರ್ದೇಶಕ ರಾಜ್ ನಿದಿಮೋರು ಅವರ ಜೊತೆ ಸಮಂತಾ ಇಂದು (ಡಿಸೆಂಬರ್ 1) ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ವಿವಾಹವಾಗುತ್ತಿದ್ದಾರೆ ಎಂಬ ವದಂತಿಗಳು ವೈರಲ್ ಆಗಿವೆ.

ಸಮಂತಾ ಮತ್ತು ರಾಜ್ ‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 2’ ನಲ್ಲಿ ಒಟ್ಟಿಗೆ ನಟಿಸಿದ್ದು, ಆ ನಂತರ ಹಲವಾರು ಬಾರಿ ಸಾರ್ವಜನಿಕರ ಮುಂದೆ ಜೊತೆಯಾಗಿರುವ ದೃಶ್ಯಗಳು ಕಂಡುಬಂದಿದ್ದವು. ಸಮಂತಾ ಮೊದಲ ಪತಿ ನಾಗ ಚೈತನ್ಯ ಈಗಾಗಲೇ ಶೋಭಿತಾ ಧುಲಿಪಾಲ್ ಜೊತೆ ಮದುವೆಯಾಗಿದ್ದು, ಹೊಸ ಬಾಳನ್ನು ಆರಂಭಿಸಿದ್ದಾರೆ. ಇದೇ ರೀತಿಯಾಗಿ, ಸಮಂತಾ–ರಾಜ್ ಅವರ ಹೊಸ ಜೀವನ ಆರಂಭಿಸುತ್ತಿದ್ದಾರೆ ಎಂಬಂತೆ ಊಹೆಗಳು ಹರಿದಾಡುತ್ತಿವೆ.
ಸಂದರ್ಭದಲ್ಲಿ ರಾಜ್ ನಿದಿಮೋರು ಅವರ ಮೊದಲ ಪತ್ನಿ ಶ್ಯಾಮಲಿ ಇನ್ಸ್ಟಾಗ್ರಾಮ್ನಲ್ಲಿ ‘ಹತಾಶರಾದ ಜನರು ಹತಾಶ ಕೆಲಸಗಳನ್ನು ಮಾಡುತ್ತಾರೆ’ ಎಂಬ ಪೋಸ್ಟ್ ಹಂಚಿಕೊಂಡಿದ್ದಾರೆ. ಸಮಂತ - ರಾಜ್ ವಿವಾಹದ ಸುದ್ದಿ ಹರಿದಾಡುತ್ತಿರುವ ಸಮಯದಲ್ಲಿ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದೆ.
ವದಂತಿಗಳ ಪ್ರಕಾರ, ಸಮಂತಾ ಮತ್ತು ರಾಜ್ ನಿಧಿಮೋರು ಕೆಲವು ಸಮಯದಿಂದ ಸಂಬಂಧದಲ್ಲಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ 2 ಮತ್ತು ಸಿಟಾಡೆಲ್ ಸರಣಿಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ಬಳಿಕ ಅವರ ಆತ್ಮೀಯತೆ ಹೆಚ್ಚಾಗಿದೆ. ಸದ್ಗುರು ಜಗ್ಗಿ ವಾಸುದೇವ್ ಅವರ ಮೇಲಿನ ಭಕ್ತಿ ಮತ್ತು ಇಶಾ ಫೌಂಡೇಶನ್ ಜೊತೆ ಅವರ ಸಂಬಂಧದಿಂದಾಗಿ ಸಮಂತಾ ಅಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈವರೆಗೆ ಸಮಂತಾ ಅಥವಾ ರಾಜ್ ನಿಧಿಮೋರು ಇವರಲ್ಲಿ ಯಾರಿಂದಲಾದರೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.