ಮಂಗಳೂರು, ಡಿ. 13 (DaijiworldNews/TA): ಯಸ್ ಬಿ ಗ್ರೂಪ್ಸ್ ಅರ್ಪಿಸುವ ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ನಡಿ ತಯಾರಾದ ಪ್ರತೀಕ್ ಯು.ಪೂಜಾರಿ ಕಾವೂರು ನಿರ್ಮಾಣದ, ಭರತ್ ಶೆಟ್ಟಿ ಕಥೆ, ಪರಿಕಲ್ಪನೆ ನಿರ್ದೇಶನದ "ಪಿಲಿಪಂಜ' ತುಳು ಸಿನೆಮಾ ಡಿ.12ರಿಂದ ಕರಾವಳಿಯಾದ್ಯಂತ ತೆರೆ ಕಂಡಿದೆ.

ಮಂಗಳೂರಿನಲ್ಲಿ ಪಿವಿಆರ್, ಸಿನೆ ಪೊಲಿಸ್, ಭಾರತ್ ಸಿನೆಮಾಸ್, ಸುರತ್ಕಲ್ನಲ್ಲಿ ಸಿನೆಗ್ಯಾಲಕ್ಸಿ, ಪಡುಬಿದ್ರೆ ಯಲ್ಲಿ ಭಾರತ್ ಸಿನೆಮಾಸ್, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನೆಮಾಸ್, ಮಣಿಪಾಲದಲ್ಲಿ ಭಾರತ್ ಸಿನೆಮಾಸ್, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಭಾರತ್ ಸಿನೆಮಾಸ್, ದೇರಳಕಟ್ಟೆಯಲ್ಲಿ ಭಾರತ್ ಸಿನೆಮಾಸ್ ನಲ್ಲಿ ಸಿನೆಮಾ ತೆರೆಕಂಡಿದೆ. ಮಂಗಳೂರಿನ ಭಾರತ್ ಸಿನೆಮಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಪೂಜಾರಿ, ಖ್ಯಾತ ಚಿತ್ರ ನಟ ಮತ್ತು ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತು ಇತರ ಅತಿಥಿ ಗಣ್ಯರು ದೀಪ ಬೆಳಗಿಸಿ ನೂತನ ಚಲನ ಚಿತ್ರದ ಪ್ರದರ್ಶನಕ್ಕೆ ಚಾಲನೆ ನೀಡಿದರು.
\ಬಳಿಕ ಸತೀಶ್ ಕುಂಪಲ ಅವರು ಮಾತನಾಡಿ, ಹುಲಿ ಕುಣಿತ ತುಳು ನಾಡಿನ ವಿಶೇಷ ಜಾನಪದ ನೃತ್ಯ. ಅದರ ಮೂಲಕವೇ ಪಿಲಿ ಪಂಜ ಚಿತ್ರ ಬಂದಿದೆ. ತುಳು ಚಿತ್ರ ರಂಗ ಯಶಸ್ಸಿನತ್ತ ಸಾಗುತ್ತಿದ್ದು, ಚಿತ್ರವನ್ನು ವೀಕ್ಷಣೆ ಮಾಡಿ ಜನರು ಸಹಕಾರ ನೀಡ ಬೇಕು. ಎಲ್ಲರ ಪ್ರೋತ್ಸಾಹ ದೊರೆತು ಪಿಲಿ ಪಂಜ ಯಶಸ್ವಿಯಾಗಲಿ ಎಂದು ಹಾರೈಸಿದರು. ಇದೀಗ ಚಿತ್ರಮಂದಿರಗಳಲ್ಲಿ ಸಿನಿಮಾವು ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಗಳಿಸಿದೆ.