ಹೈದರಾಬಾದ್, ಫೆ. 01 (DaijiworldNews/AA): ತೆಲುಗು ಸೂಪರ್ ಸ್ಟಾರ್ ರಾಮ್ಚರಣ್ ದಂಪತಿ ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಮೆಗಾಸ್ಟಾರ್ ಕುಟುಂಬಕ್ಕೆ ಇಬ್ಬರು ಹೊಸ ಸದಸ್ಯರ ಆಗಮನವಾಗಿದೆ.

ಮದುವೆಯಾಗಿ ಅನೇಕ ವರ್ಷಗಳು ಕಳೆದ ಬಳಿಕ ಎರಡು ವರ್ಷದ ಹಿಂದೆ ರಾಮ್ಚರಣ್ ಉಪಾಸನಾ ದಂಪತಿಗೆ ಪುತ್ರಿ ಜನಿಸಿದ್ದಳು. ಇದೀಗ ಈ ದಂಪತಿಗೆ ಅವಳಿ ಮಕ್ಕಳು ಜನಿಸಿದ್ದು, ಒಂದು ಹೆಣ್ಣು ಹಾಗೂ ಇನ್ನೊಂದು ಗಂಡು ಮಗು ಜನಿಸಿದೆ.
ಅವಳಿ ಮಕ್ಕಳು ಜನಿಸಿರುವ ವಿಚಾರವನ್ನ ಚಿರಂಜೀವಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. ಕೋನಿಡೇಲ ಕುಟುಂಬ ತುಂಬಾ ಸಂತೋಷದಲ್ಲಿದೆ. ಜ.31ರಂದು ಹೆರಿಗೆಯಾಗಿದ್ದು, ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ, ಹರಕೆ, ಹಾರೈಕೆಗೆ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.