ಹೈದರಾಬಾದ್, ಫೆ. 23 (DaijiworldNews/AA): ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಇದೇ ಫೆ.26 ರಂದು ಸಪ್ತಪದಿ ತುಳಿಯಲಿದ್ದಾರೆ. ಇದೀಗ ಮದುವೆ ಆಮಂತ್ರಣವನ್ನು ಹಂಚಿಕೊಂಡಿರುವ ರಶ್ಮಿಕಾ, 'ನಮ್ಮದು ವಿರೋಶ್ ಜೋಡಿ, ಮದುವೆಗೆ ಬನ್ನಿ' ಎಂದು ಆಹ್ವಾನಿಸಿದ್ದಾರೆ.

ನನ್ನ ಪ್ರೀತಿ ಪಾತ್ರರೇ… ನಾನು ಯಾವುದೇ ಯೋಜನೆಗಳನ್ನು ರೂಪಿಸೋದಕ್ಕೂ ಮೊದಲು, ನನಗಾಗಿ ಏನನ್ನಾದರೂ ಆರಿಸಿಕೊಳ್ಳುವ ಮೊದಲು ನೀವು ಇರುತ್ತೀರಿ. ತುಂಬಾ ಪ್ರೀತಿಯಿಂದ, ನೀವು ನಮಗೆ ಒಂದು ಹೆಸರನ್ನು ಇಟ್ಟಿದ್ದೀರಿ. ನೀವು ನಮ್ಮನ್ನು 'ವಿರೋಶ್' ಎಂದು ಕರೆದಿದ್ದೀರಿ. ಹೀಗಾಗಿ, ಇಂದು ತುಂಬು ಹೃದಯದಿಂದ ಗೌರವಾರ್ಥವಾಗಿ ನಿಮ್ಮನ್ನು ಆಹ್ವಾನಿಸುತ್ತೇವೆ. ನಾವು ಅದನ್ನು 'ವಿರೋಶ್ ಮದುವೆ' ಎಂಬ ಹೆಸರಿನಿಂದ ಕರೆಯೋಕೆ ಬಯಸುತ್ತೇವೆ ಎಂದು ರಶ್ಮಿಕಾ ಅತಿಥಿಗಳಗೆ ನಟಿ ಆಹ್ವಾನ ನೀಡಿದ್ದಾರೆ.
ನಮ್ಮನ್ನು ತುಂಬಾ ಪ್ರೀತಿಯಿಂದ ನೋಡುತ್ತಿರುವುದಕ್ಕೆ ಧನ್ಯವಾದಗಳು. ನೀವು ನಮ್ಮ ಮದುವೆಯ ಭಾಗವಾಗಿದ್ದೀರಿ. ಅಪ್ಪುಗೆ ಮತ್ತು ಪ್ರೀತಿಯೊಂದಿಗೆ ಸ್ವಾಗತ ಎಂದು ರಶ್ಮಿಕಾ ಮಂದಣ್ಣ ಆಮಂತ್ರಣವನ್ನು ಹಂಚಿಕೊಂಡಿದ್ದಾರೆ.