ಬೆಂಗಳೂರು, ಮಾ. 14 (DaijiworldNews/TA): ಕರಾವಳಿ ಮೂಲದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರ ಮದುವೆ ಕುರಿತು ಹೊಸ ಮಾಹಿತಿ ಕೇಳಿಬರುತ್ತಿದೆ. 44ರ ಹರೆಯದ ಈ ಜನಪ್ರಿಯ ನಟಿ ಇನ್ನೂ ಮದುವೆಯಾಗದೇ ಇರುವುದರಿಂದ ಅವರ ಕುಟುಂಬದವರಿಗೂ ಅಭಿಮಾನಿಗಳಿಗೂ ಹಲವು ವರ್ಷಗಳಿಂದ ಕುತೂಹಲ ಮೂಡಿಸಿತ್ತು. ಇದೀಗ ಅನುಷ್ಕಾ ಮದುವೆಗೆ ಒಪ್ಪಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಹಿಂದೆ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆಯಾಗಲಿದ್ದಾರೆ ಎಂಬ ಗಾಸಿಪ್ಗಳು ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆದರೆ ಇಬ್ಬರೂ ಈ ವಿಚಾರದ ಬಗ್ಗೆ ಸ್ಪಷ್ಟವಾಗಿ ಮಾತನಾಡದೆ, ಪ್ರಶ್ನೆಗಳಿಗೆ ತಪ್ಪಿಸಿಕೊಂಡಿದ್ದರು. ಇಬ್ಬರೂ ಇನ್ನೂ ಮದುವೆಯಾಗದಿರುವುದರಿಂದ ಈ ರೀತಿಯ ವದಂತಿಗಳು ಹೆಚ್ಚಾಗಿದ್ದವು.
ಇದೀಗ ಆ ಗಾಸಿಪ್ಗಳಿಗೆ ತೆರೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 44ರ ವಯಸ್ಸಿನಲ್ಲೂ ಮದುವೆಯಾಗದಿದ್ದ ಅನುಷ್ಕಾ ಶೆಟ್ಟಿ ಈಗ ವಿವಾಹಕ್ಕೆ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಆಪ್ತ ಮೂಲಗಳ ಪ್ರಕಾರ, ಬೆಂಗಳೂರಿನ ಮೂಲದ ಒಬ್ಬ ಉದ್ಯಮಿಯೊಂದಿಗೆ ಅನುಷ್ಕಾ ಶೆಟ್ಟಿಯ ವಿವಾಹ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಎರಡು ಕುಟುಂಬಗಳ ಮಧ್ಯ ಮಾತುಕತೆ ನಡೆದಿದ್ದು, ಈ ವರ್ಷವೇ ಮದುವೆ ನಡೆಯಬಹುದು ಎಂಬ ಮಾಹಿತಿ ಹರಿದಾಡುತ್ತಿದೆ. ಈ ಕುರಿತು ಅಧಿಕೃತ ಘೋಷಣೆಯನ್ನು ಅನುಷ್ಕಾ ಶೆಟ್ಟಿ ಶೀಘ್ರದಲ್ಲೇ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.