ಮುಂಬೈ, ಏ. 30 (DaijiworldNews/AK): ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ವಿವಾಹ ಆಗಿ ಸುಖ ಜೀವನ ನಡೆಸುತ್ತಿದ್ದಾರೆ. ಸಮಂತಾ ವಿಚ್ಛೇದನದ ಬಳಿಕ ನಾಗ ಚೈತನ್ಯ ಬಾಳಲ್ಲಿ ಶೋಭಿತಾ ಅಗಮಿಸಿದರು.

ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಚ್ಯಾಟ್ ಮಾಡಿಕೊಂಡು, ಭೇಟಿ ಆಗಿ, ಗೆಳೆತನ ಮೂಡಿ, ಅದು ಪ್ರೀತಿಗೆ ತಿರುಗಿ ಈಗ ವಿವಾಹ ಆಗಿದ್ದಾರೆ. ಈಗ ನಾಗಚೈತನ್ಯ ಅವರು ಶೋಭಿತಾ ಬಗ್ಗೆ ಮಾತನಾಡಿದ್ದಾರೆ. ಶೋಭಿತಾ ಅವರನ್ನು ನೋಡಿದರೆ ಬೇಸರವಾಗುತ್ತದೆ ಎಂದಿದ್ದಾರೆ.
ಸಮಂತಾ ಜೊತೆಗಿನ ವಿಚ್ಛೇದನದ ಬಳಿಕ ಕೆಲ ಸಮಯ ನಾಗ ಚೈತನ್ಯ ಒಂಟಿಯಾಗೇ ಇದ್ದರು. ಈ ಒಂಟಿತನವನ್ನು ದೂರ ಮಾಡಿದ್ದು ಶೋಭಿತಾ. ಹಲವು ಸಮಯ ಇಬ್ಬರೂ ಒಟ್ಟಿಗೆ ಸುತ್ತಾಡಿದರು. ಆ ಬಳಿಕ ಮದುವೆ ಆಗುವ ನಿರ್ಧಾರಕ್ಕೆ ಬಂದರು. ಈ ಬೆನ್ನಲ್ಲೇ ಶೋಭಿತಾ ಸಾಕಷ್ಟು ಹೇಟ್ ಕಮೆಂಟ್ ಅನುಭವಿಸಬೇಕಾಯಿತು. ‘ನಾಗ ಚೈತನ್ಯ ಹಾಗೂ ಸಮಂತಾ ದೂರ ಆಗಲು ನೀವು ಕಾರಣ’ ಎಂದು ಅನೇಕರು ಶೋಭಿತಾ ಮೇಲೆ ಆರೋಪ ಹೊರಿಸಿದರು.
ಈ ವಿಷಯವಾಗಿ ಶೋಭಿತಾ ಅವರ ಪರಿಸ್ಥಿತಿ ನೋಡಿ ಸಂಕಟವಾಗುತ್ತಿದೆ. ಶೋಭಿತಾ ತಮ್ಮನ್ನು ಅರ್ಥೈಸಿಕೊಳ್ಳುತ್ತಿರುವ ರೀತಿ ನೋಡಿ ಖುಷಿ ಕೂಡ ಇದೆ. ‘ಅವಳನ್ನು ನೋಡಿದರೆ ಬೇಸರವಾಗುತ್ತದೆ. ಇದರಲ್ಲಿ ಅವಳ ತಪ್ಪೇನು ಇಲ್ಲ. ನನ್ನ ಹಿಂದಿನ ಜೀವನಕ್ಕೂ ಅವಳಿಗೂ ಯಾವುದೇ ಸಂಬಂಧ ಇಲ್ಲ. ಅವಳಿಗೆ ಸಾಕಷ್ಟು ಧನ್ಯವಾದ ಹೇಳಬೇಕು. ಪ್ರಬುದ್ಧವಾಗಿ ವರ್ತಿಸಿದ್ದಾರೆ. ಅವರು ನಿಜವಾದ ಹೀರೋ’ ಎಂದು ನಾಗ ಚೈತನ್ಯ ಹೇಳಿಕೊಂಡಿದ್ದಾರೆ.