ಬೆಂಗಳೂರು, ಮೇ. 24 (DaijiworldNews/AK): ಈ ಬಾರಿ ನಡೆದ ಫ್ರಾನ್ಸ್ನಲ್ಲಿ ನಡೆದ ಫೇಮಸ್ ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಕನ್ನಡದ ನಟಿ ಪ್ರಿಯಂಕಾ ಉಪೇಂದ್ರ ಅವರು ತಮ್ಮ ಆಕರ್ಷಕ ನೋಟದ ಮೂಲಕ ಎಲ್ಲರ ಗಮನ ಸೆಳೆದರು.

ಈ ಬಾರಿಯ ಫೆಸ್ಟಿವಲ್ನಲ್ಲಿ ಭಾಗವಹಿಸಿದ ಕನ್ನಡದ ಸೆಲೆಬ್ರಿಟಿಗಳಲ್ಲಿ ಪ್ರಮುಖರಗಿದ್ದ ಪ್ರಿಯಂಕಾ ಉಪೇಂದ್ರ ಅವರು ರೆಡ್ ಕಾರ್ಪೆಟ್ ಮೇಲೆ ಎಲ್ಲರ ಗಮನ ಸೆಳೆದರು.
ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್ ರೆಡ್ ಕಾರ್ಪೆಟ್ನಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಎಲಿಗೆಂಟ್ ಇಂಡಿಯನ್ ಗ್ಲಾಮರ್” ಥೀಮ್ನಲ್ಲಿ ಕಾಣಿಸಿಕೊಂಡರು. ಪ್ರಿಯಾಂಕಾ ಉಪೇಂದ್ರ ಧರಿಸಿದ್ದ ಉಡುಪು ಹೆಚ್ಚು ಮಿಂಚುವಂತಿರದೆ, ಸಾಫ್ಟ್ ಹಾಗೂ ಕ್ಲಾಸಿ ಸ್ಟೈಲ್ನಲ್ಲಿ ಗಮನ ಸೆಳೆಯಿತು.
‘ಸೆಪ್ಟೆಂಬರ್ 21’ ಚಿತ್ರದ ವರ್ಲ್ಡ್ ಪ್ರೀಮಿಯರ್ ಹಿನ್ನೆಲೆಯಲ್ಲಿ ಕೇನ್ಸ್ನಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ ಉಪೇಂದ್ರ, ತಮ್ಮ ಲುಕ್ ಮೂಲಕ ಕನ್ನಡ ಸಿನಿರಂಗದ ಘನತೆಯನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮತ್ತಷ್ಟು ಹೆಚ್ಚಿಸಿದ್ದಾರೆ.
ಕೇನ್ಸ್ ರೆಡ್ ಕಾರ್ಪೆಟ್ನಲ್ಲಿ ವಾಕ್ ಮಾಡುವುದು ಅನೇಕ ಕಲಾವಿದರ ಕನಸಾಗಿದೆ. ಆ ಕನಸನ್ನು ಇದೀಗ ಪ್ರಿಯಾಂಕಾ ಉಪೇಂದ್ರ ಸಾಕಾರಗೊಳಿಸಿದ್ದಾರೆ.