ಮುಂಬೈ, ಜೂ. 30 (DaijiworldNews/AA): ನಟ ಆಮಿರ್ ಮೂರನೇ ಬಾರಿಗೆ ಮದುವೆಯಾಗಲಿದ್ದಾರೆ. ಅವರು ಮತ್ತೆ ಮದುವೆಯಾಗಲು ಬಯಸಿದರೆ, ನಾನು ಅದಕ್ಕೆ ಸಿದ್ಧ. ನಾನು ಇಸ್ಲಾಂ ಅನ್ನು ಸಹ ಸ್ವೀಕರಿಸುತ್ತೇನೆ ಎಂದು ನಟಿ ರಾಖಿ ಸಾವಂತ್ ತಿಳಿಸಿದ್ದಾರೆ.

ರಾಖಿ ಸಾವಂತ್ ಅವರು ಆಮಿರ್ ಖಾನ್ ಅವರ ಮದುವೆಗೆ ಪ್ರತಿಕ್ರಿಯಿಸಿರುವ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯೊಂದರಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ನೋಡಿದ ನಂತರ ಕೆಲವು ನೆಟ್ಟಿಗರು ರಾಖಿಯನ್ನು ಟ್ರೋಲ್ ಮಾಡಿದ್ದಾರೆ. ಕೆಲವರು ರಾಖಿ ಸಾವಂತ್ ಅವರ ಹಿಂದಿನ ಮದುವೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. 'ರಾಖಿ, ನೀವು ಎರಡು ಬಾರಿ ಮದುವೆಯಾಗಿದ್ದೀರಿ. ಇದಲ್ಲದೆ, ನೀವು ವಿಚ್ಛೇದನ ಕೂಡ ಪಡೆದಿದ್ದೀರಿ' ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ರಾಖಿ ಸಾವಂತ್ ಸಾಮಾಜಿಕ ಮಾಧ್ಯಮದಲ್ಲಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರ ಫ್ಯಾಷನ್ ಸೆನ್ಸ್, ಅವರು ಧರಿಸುವ ಬಟ್ಟೆಗಳ ಮೂಲಕ, ಅವರು ನೀಡುವ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಆಮಿರ್ ಖಾನ್ ಮತ್ತು ಅವರ ಮದುವೆಯ ಬಗ್ಗೆ ರಾಖಿ ಸಾವಂತ್ ನೀಡಿದ ಹೇಳಿಕೆಯಿಂದ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.