ಮುಂಬೈ, ಅ.07 (DaijiworldNews/AA): ಬಾಲಿವುಡ್ನ ತಾರಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಸಿಹಿ ಸುದ್ದಿಯನ್ನು ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಿಯಾರಾ ಮತ್ತು ಸಿದ್ಧಾರ್ಥ್ ಹೊಸ ಜೋಡಿ ಬೇಬಿ ಶೂಸ್ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅವರ ಮೊದಲ ಮಗಳು ಸಾರಾಯ ಕೂಡ ಇದ್ದಾಳೆ.
'ಎಲ್ಲಕ್ಕಿಂತ ದೊಡ್ಡ ಉಡುಗೊರೆಯಿಂದ ಮತ್ತೊಮ್ಮೆ ಆಶೀರ್ವದಿಸಲ್ಪಟ್ಟಿದ್ದೇವೆ' ಎಂದು ಕಿಯಾರಾ ಸಿದ್ಧಾರ್ಥ್ ಪೋಸ್ಟ್ಗೆ ಕ್ಯಾಪ್ಷನ್ ನೀಡಿದ್ದಾರೆ. ಇನ್ನು ಕಳೆದ ವರ್ಷ ತಮ್ಮ ಮೊದಲ ಮಗುವಿನ ಆಗಮನದ ಸುದ್ದಿಯನ್ನು ಘೋಷಿಸಿದ್ದ ರೀತಿಯಲ್ಲೇ ಈ ಬಾರಿಯೂ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.
ಇನ್ನು ಕಿಯಾರಾ ಮತ್ತು ಸಿದ್ಧಾರ್ಥ್ಗೆ ನಟಿ ಭೂಮಿ ಪೆಡ್ನೇಕರ್, ಕೊರಿಯೋಗ್ರಾಫರ್ ಬಾಸ್ಕೋ ಮಾರ್ಟಿಸ್, ನಿರ್ದೇಶಕ ಕರಣ್ ಜೋಹರ್ ಆಲಿಯಾ ಭಟ್, ಅನಿಲ್ ಕಪೂರ್, ಅನನ್ಯಾ ಪಾಂಡೆ, ಯಾಮಿ ಗೌತಮ್ ಧಾರ್, ನೀನಾ ಗುಪ್ತಾ ಹಾಗೂ ಅಥಿಯಾ ಶೆಟ್ಟಿ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಮತ್ತು ಅಭಿಮಾನಿಗಳು ಶೂಭಾಶಯ ಕೋರಿದ್ದಾರೆ.