ಬೆಂಗಳೂರು,ಅ.06 (DaijiworldNews/AK) : ಬಿಗ್ಬಾಸ್ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ತತಮ್ಮ ಭಾವಿ ಪತಿಯನ್ನ ಅಧಿಕೃತವಾಗಿ ಪರಿಚಯಿಸಿದ್ದಾರೆ. ನಟಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚೆಗೆ ಪ್ಯಾರೀಸ್ನ ಐಫೆಲ್ ಟವರ್ ಮುಂದೆ ಹುಡುಗನೊಬ್ಬನ ಕೈಹಿಡಿದು ನಡೆಯುತ್ತಿರುವ ಫೋಟೋ ಹಂಚಿಕೊಂಡಿದ್ದ ಸ್ಪಂದನಾ, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದರು. ಆ ಫೋಟೋದಲ್ಲಿದ್ದ ಹುಡುಗ ಯಾರು ಅನ್ನೋ ಪ್ರಶ್ನೆ ಎಲ್ಲರಲ್ಲೂ ಇತ್ತು. ಆದರೆ, ಕೊನೆಗೂ ಈ ಎಲ್ಲ ಪ್ರಶ್ನೆಗಳಿಗೆ ನಟಿ ತೆರೆ ಎಳೆದಿದ್ದಾರೆ.
ವರುಣ್ ಮುನಿರಾಜು ಅವರು ಸ್ಪಂದನಾ ಅವರಿಗೆ ಪ್ರಪೋಸ್ ಮಾಡಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪ್ರೇಮಕಥೆಯ ಬಗ್ಗೆ ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.