ಹೈದರ್ಬಾದ್,ಅ.19 (DaijiworldNews/AK): ತೆಲಂಗಾಣದಲ್ಲಿ ದಸರಾ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದ. ಸಾಂಪ್ರದಾಯಿಕ ಬತುಕಮ್ಮ ಹಬ್ಬವು ಈ ಉತ್ಸವದ ಪ್ರಮುಖ ಆಕರ್ಷಣೆ. ಬೇರೆ ಪ್ರದೇಶಗಳಿಂದ ಬಂದು ತೆಲಂಗಾಣದಲ್ಲಿ ನೆಲೆಸಿರುವ ಜನರು ಕೂಡ ಈ ಸಂಪ್ರದಾಯವನ್ನು ಅಪ್ಪಿಕೊಂಡು ಬಹಳ ಉತ್ಸಾಹದಿಂದ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ.

ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರನ್ನು ವಿವಾಹವಾದ ಬಳಿಕ, ಈಗ ತೆಲಂಗಾಣದ ಈ ಸಾಂಪ್ರದಾಯಿಕ ಸಂಭ್ರಮದ ಭಾಗವಾಗಿದ್ದಾರೆ. ಈ ವರ್ಷದ ಬತುಕಮ್ಮ ಹಬ್ಬದ ಆಚರಣೆಯಲ್ಲಿ ನಟಿ ಭಾಗವಹಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ವಿಶೇಷವಾದ ಖುಷಿಯನ್ನು ನೀಡಿದ್ದಾರೆ.
ದಸರಾ ಹಬ್ಬದ ಮುನ್ನ ದಿನವಾದ ಭಾನುವಾರದಂದು ತೆಲಂಗಾಣ ಸರ್ಕಾರವು ಟ್ಯಾಂಕ್ ಬಂಡ್ ಪ್ರದೇಶದಲ್ಲಿ ಬತುಕಮ್ಮ ಉತ್ಸವವನ್ನು ಅದ್ದೂರಿಯಾಗಿ ಆಯೋಜಿಸಿತ್ತು. ಈ ವಿಶೇಷ ಕಾರ್ಯಕ್ರಮಕ್ಕೆ ಜನಪ್ರಿಯ ಜೋಡಿಯಾದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರನ್ನು ಆಹ್ವಾನಿಸಲಾಗಿತ್ತು.
ಸ್ಟೈಲಿಶ್ ಹಾಗೂ ಸುಂದರವಾದ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ನಟಿ ರಶ್ಮಿಕಾ ಎಲ್ಲರ ಗಮನ ಸೆಳೆದರು. ಅಲ್ಲಿ ಸೇರಿದ್ದ ಇತರ ಮಹಿಳೆಯರೊಂದಿಗೆ ಕೈಕೈ ಹಿಡಿದು ಬತುಕಮ್ಮ ಹಾಡುಗಳಿಗೆ ಹೆಜ್ಜೆ ಹಾಕಿದರು. ಇವರು ನೃತ್ಯ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.