ಅಮೃತಸರ, ಅ.21 (DaijiworldNews/AK): ದಸರಾ ಹಬ್ಬದ ಹಿನ್ನೆಲೆ ಇತ್ತೀಚೆಗೆ ಅಮೃತಸರದ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ್ದ ನಟಿ ಸಾರಾ ಅಲಿ ಖಾನ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ನಟಿ ಸಾರಾ ಅಲಿ ಖಾನ್ ಮತ್ತು ಆಯುಷ್ಮಾನ್ ಖುರಾನಾ ತಮ್ಮ ಮುಂಬರುವ ಚಲನಚಿತ್ರ ‘ಉಡ್ತಾ ತೀರ್’ ಬಿಡುಗಡೆಗೆ ಮುನ್ನ, ದಸರಾ ಹಬ್ಬದ ಹಿನ್ನೆಲೆ ಆಶೀರ್ವಾದ ಪಡೆಯಲು ಇತ್ತೀಚೆಗೆ ಅಮೃತಸರದ ಸುವರ್ಣ ದೇವಾಲಯಕ್ಕೆ ಭೇಟಿ ನೀಡಿದ್ದರು. ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಸಾರಾ ಅವರು ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಂಡುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಾರಾ ಮತ್ತು ಆಯುಷ್ಮಾನ್ ದರ್ಬಾರ್ ಸಾಹಿಬ್ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯವಿರುವ ವಿಡಿಯೋ ವೈರಲ್ ಆಗಿವೆ. ಈ ವೇಳೆ ನಟ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಮಂಗಳವಾರದಂದು, ಸಾರಾ ಅವರು ತಮ್ಮ ಭೇಟಿಯ ಸಂದರ್ಭದಲ್ಲಿ ಆಯುಷ್ಮಾನ್ ಅವರೊಂದಿಗೆ ತೆಗೆಸಿಕೊಂಡ ಚಿತ್ರವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ನಟ-ನಟಿ, ಸುವರ್ಣ ದೇವಾಲಯದ (ಗೋಲ್ಡನ್ ಟೆಂಪಲ್) ಮುಂದೆ, ಬಿಳಿ ಬಣ್ಣದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.