ಹೈದರ್ಬಾದ್, ಅ.22 (DaijiworldNews/AK):‘ಹನುಮಾನ್’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರಿ ಯಶಸ್ಸು ಗಳಿಸಿರುವ ಯುವ ನಟ ತೇಜ ಸಜ್ಜಾ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ತಮ್ಮ ವೈಯಕ್ತಿಕ ಜೀವನವನ್ನು ಸದಾ ಗೌಪ್ಯವಾಗಿಡುವ ಅವರು, ಅಮೆರಿಕ ಮೂಲದ ಟೆಕ್ಕಿ ಯುವತಿಯೊಂದಿಗೆ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಹಿರಿಯರು ನಿಶ್ಚಯಿಸಿರುವ ಈ ಮದುವೆಯು ಡಿಸೆಂಬರ್ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ಸರಳವಾಗಿ ನಡೆಯಲಿದೆ.
ನವೆಂಬರ್ನಲ್ಲಿ ನಿಶ್ಚಿತಾರ್ಥ ಸಮಾರಂಭ ಜರುಗಲಿದೆ. ಡಿಸೆಂಬರ್ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ಅತಿ ಕಡಿಮೆ ಜನಸ್ತೋಮದೊಂದಿಗೆ ವಿವಾಹ ನಡೆಯಲಿದೆ. ಅಮೆರಿಕದಲ್ಲಿ ನೆಲೆಸಿರುವ ಟೆಕ್ಕಿ ಯುವತಿ ಜೊತೆ ತೇಜ ಸಜ್ಜಾ ಮದುವೆ ಆಗಲಿದ್ದಾರೆ. ಆ ಯುವತಿಯು ತಂದೆಯ ಜೊತೆ ಟೆಕ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾರಂಗದ ಗ್ಲಾಮರ್ ಜಗತ್ತಿನಿಂದ ಸಂಪೂರ್ಣ ದೂರವಿದ್ದಾರೆ.
ಕೇವಲ ಕುಟುಂಬದವರು ಮತ್ತು ಅತ್ಯಂತ ಆಪ್ತ ಸ್ನೇಹಿತರ ಉಪಸ್ಥಿತಿಯಲ್ಲಿ ವಿವಾಹ ಸಮಾರಂಭ ಜರುಗಲಿದೆ. ನಂತರ ಹೈದರಾಬಾದ್ನಲ್ಲಿ ಚಿತ್ರರಂಗದ ಸ್ನೇಹಿತರಿಗಾಗಿ ವಿಶೇಷ ರಿಸೆಪ್ಷನ್ ಆಯೋಜಿಸಲು ತೇಜ ಸಜ್ಜಾ ತೀರ್ಮಾನಿಸಿದ್ದಾರೆ. ಇದು ಸಂಪೂರ್ಣವಾಗಿ ಪೋಷಕರು ನಿಶ್ಚಯಿಸಿದ ಅರೇಂಜ್ಡ್ ಮ್ಯಾರೇಜ್ ಎಂದು ತೇಜ ಸಜ್ಜಾ ಅವರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.