ಕರಾಚಿ, ಅ.31 (DaijiworldNews/AA): ದೇಶದಲ್ಲಿ 'ರಾಮಾಯಣ' ಸಿನಿಮಾ ಬಿಡುಗಡೆಗೆ ಆಗ್ರಹಿಸಿ ಪಾಕಿಸ್ತಾನದಲ್ಲಿರುವ ಹಿಂದೂಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಕರಾಚಿಯಲ್ಲಿ ಪ್ರತಿಭಟನೆ ನಡೆದ ಒಂದು ವಿಡಿಯೋ ವೈರಲ್ ಆಗಿದೆ.

ಕರಾಚಿ ನಗರದ ಹಿಂದೂ ಸಮುದಾಯದ ಜನರು ಬೀದಿಗಳಲ್ಲಿ ಈ ಚಿತ್ರದ ಪೋಸ್ಟರ್ ಹಿಡಿದು ಮೆರವಣಿಗೆ ಮಾಡಿದ್ದಾರೆ. ಭಕ್ತಿಗೀತೆಗಳನ್ನು ಹಾಡುವ ಜೊತೆಗೆ ಜೈ ಶ್ರೀ ರಾಮ್ ಎಂದು ಘೋಷಣೆಗಳನ್ನು ಕೂಗಿದರು.
ಈ ಚಲನಚಿತ್ರವು ನವೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಪಾಕ್ನ ಕರಾಚಿಯಲ್ಲಿ ಅಭಿಮಾನಿಗಳು ಪೋಸ್ಟರ್ಗಳನ್ನು ಹಿಡಿದುಕೊಂಡು ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಇರುವ ಪೋಸ್ಟರ್ಗಳನ್ನು ಹಿಡಿದು ಜನರು ಮೆರವಣಿಗೆ ಮಾಡಿದ್ದಾರೆ.
ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣಲಿ. ಇದು ಆಸ್ಕರ್ ಪ್ರಶಸ್ತಿಯನ್ನು ಗೆಲ್ಲಲಿ ಎಂದು ಪಾಕ್ನ ಕರಾಚಿಯಲ್ಲಿ ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ.