ಬೆಂಗಳೂರು, ಅ.31 (DaijiworldNews/AK):ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ \ ಮಗ ವಿನೀಶ್ಗೆ ಇಂದು 18ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಮಗನಿಗೆ ಚಾಕಲೇಟ್ ಕೊಟ್ಟು ದರ್ಶನ್ ವಿಶ್ ಮಾಡಿದ್ದಾರೆ.

ಜೈಲಲ್ಲಿರುವ ದರ್ಶನ್ ಮಗ ವಿನೀಶ್ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ, ಚಾಕೋಲೇಟ್ ಕೊಟ್ಟಿದ್ದಾರೆ. ಅಪ್ಪನ ಗಿಫ್ಟ್ಗೆ ಮಗ ವಿನೀಶ್ ಭಾವುಕರಾಗಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ವಿನೀಸ್ ಸ್ಟೋರಿ ಹಂಚಿಕೊಂಡಿದ್ದು, ಪ್ರಪಂಚದಲ್ಲಿ ಈ ಗಿಫ್ಟಗಿಂತ ದೊಡ್ಡದು ಯಾವುದು ಇಲ್ಲ. ಥ್ಯಾಂಕ್ಸ್ ಅಪ್ಪ ಎಂದು ಬರೆದುಕೊಂಡಿದ್ದಾರೆ.