ಸ್ಯಾನ್ ಜುವಾನ್, ನ.25 (DaijiworldNews/AA): 75ನೇ ಆವೃತ್ತಿಯ ಪ್ರತಿಷ್ಠಿತ 'ಮಿಸ್ ಯೂನಿವರ್ಸ್ 2026' ಸ್ಪರ್ಧೆಯಲ್ಲಿ ಪೋರ್ಟೊ ರಿಕೊದ ಜೆನಿಫರ್ ಬರೇಟೋ ಅವರು ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ತವರು ನೆಲದಲ್ಲೇ ನಡೆದ ಈ ಭವ್ಯ ಸಮಾರಂಭದಲ್ಲಿ ಜೆನ್ನಿಫರ್ ವಿಜೇತರಾಗಿದ್ದು, ಡೊಮಿನಿಕನ್ ರಿಪಬ್ಲಿಕ್ ಮೆಲಿಸ್ಸಾ ನುನೆಜ್ ಮೊದಲ ರನ್ನರ್ ಅಪ್ ಸ್ಥಾನ ಪಡೆದ್ದಾರೆ. ವೆನೆಜುವೆಲಾದ ಕ್ಲಾರಾ ವೇಗಾಸ್ ಗೊಯೆಟ್ಜ್ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.
ಈ ಆವೃತ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕಜಿಯಾ ಲಿಜ್ ಮೆಜೊ ಕಿರೀಟ ಗೆಲ್ಲಲು ಸಾಧ್ಯವಾಗಲಿಲ್ಲ. ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು ಟಾಪ್ 30 ಸುತ್ತಿಗೆ ಅರ್ಹತೆ ಪಡೆದಿದ್ದರಾದರೂ, ಟಾಪ್ 12 ಸುತ್ತಿಗೂ ಮುನ್ನವೇ ಸ್ಪರ್ಧೆಯಿಂದ ಹೊರಬಿದ್ದರು.