ಉಡುಪಿ, ಫೆ 23 (Daijiworld News/MB): ಮಿಸ್ ದಿವಾ 2020 ಇದರ ಎಂಟನೇ ಆವೃತ್ತಿ ಮುಂಬೈನ ಅಂಧೇರಿಯಲ್ಲಿ ನಡೆದಿದ್ದು, ಉಡುಪಿ ಮೂಲದ ಆಡ್ಲಿನ್ ಕ್ಯಾಸ್ಟೆಲಿನೋ ಈ ಬಾರಿಯ ಮಿಸ್ ಯೂನಿವರ್ಸ್ 2020 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಫೆ.22ರಂದು ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದ ಈ ಸ್ಫರ್ಧೆಯಲ್ಲಿ 20 ಮಂದಿ ಹೆಸರಾಂತ ಮಾಡೆಲ್ಗಳು ಪಾಲ್ಗೊಂಡಿದ್ದು ಇದರಲ್ಲಿ ವಿಜೇತರಾದ ಆಡ್ಲಿನ್ ಕ್ಯಾಸ್ಟೆಲಿನೋಗೆ ಕಳೆದ ಬಾರಿಯ ಚಾಂಪಿಯನ್ ವರ್ತಿಕಾ ಸಿಂಗ್ ಕಿರೀಟ ತೊಡಿಸಿದರು.
ಈ ಸ್ಫರ್ಧೆಯ ತೀರ್ಪುಗಾರರಾಗಿ ಬಾಲಿವುಡ್ ನಟರಾದ ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್, ಮಿಸ್ ಯೂನಿವರ್ಸ್ 2000 ಲಾರಾ ದತ್ತಾ, ಡಿಸೈನರ್ ಗಳಾದ ಶಿವನ್ ಮತ್ತು ನರೇಶ್, ಮಿಸ್ ಸುಪ್ರಾ ನ್ಯಾಶನಲ್ 2014 ಆಶಾ ಭಟ್, ಮಿಸ್ ಯೂನಿವರ್ಸ್ ಶ್ರೀಲಂಕಾ 2006 ಜಾಕ್ವೇಲಿನ್ ಫೆರ್ನಾಂಡಿಸ್, ಡಿಸೈನರ್ ನಿಕಿಲ್ ಮೆಹ್ರಾ, ಗ್ಯಾವಿನ್ ಮಿಗೆಲ್ ಇದ್ದರು.
ನಟಿ ಮಲೈಕಾ ಅರೋರಾ ಫೈನಲ್ ಸ್ಪರ್ಧೆಯಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಆವಿತ್ರಿ ಚೌಧರಿ ಮಿಸ್ ದಿವಾ 2020 ಆಗಿ ಆಯ್ಕೆಯಾಗಿದ್ದು, ಮಿಸ್ ಸುಪ್ರನ್ಯಾಷನಲ್ 2020 ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.
ಈ ಮೊದಲು ಪುಣೆಯ ನೇಹಾ ಜೈಸ್ವಾಲ್ ಮಿಸ್ ದಿವಾ ಯೂನಿವರ್ಸ್ 2020 ರ ಮೊದಲ ರನ್ನರ್ ಅಪ್ ಆಗಿದ್ದರು. ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ 2016ರಲ್ಲಿ ಮಿಸ್ ಸುಪ್ರನ್ಯಾಷನಲ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.