ನವದೆಹಲಿ, ಫೆ.23 (DaijiworldNews/PY) : ಕತಾರ್ನಲ್ಲಿ ಪ್ರಖ್ಯಾತ ಕನ್ನಡ ಚಲನಚಿತ್ರಕಾರ, ನಟ, ನಿರ್ದೇಶಕ ಹಾಗೂ ಲೇಖಕರಾದ ನಾಗತ್ತಿಹಳ್ಳಿ ಚಂದ್ರಶೇಖರ್ ಅವರ 'ಇಂಡಿಯಾ ವರ್ಸಸ್ ಇಂಗ್ಲೇಂಡ್' ನೂತನ ಚಲನಚಿತ್ರವನ್ನು ಬಿಡುಗಡೆ ಮಾಡಲಾಯಿತು.
ಬಿಡುಗಡೆ ಸಮಾರಂಭದ ಜೊತೆಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಿರ್ದೇಶಕರು ಚಿತ್ರದ ಬಗ್ಗೆ, ತಮ್ಮ ಅನುಭವಗಳನ್ನು ಹಂಚಿಕೊಂಡರು ಹಾಗೂ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಸ್ವೀಕರಿಸಿದರು.
ಕತಾರ್ನ ಸಂಚಾಲಕರು, ಕನ್ನಡ ಮತ್ತು ತುಳು ಚಲನಚಿತ್ರ ಅಭಿಮಾನಿಗಳ ಬಳಗದ ಸುಬ್ರಹ್ಮಣ್ಯ ಹೆಬ್ಬಾಗಿಲು ಇವರು ನಾಗತ್ತಿಹಳ್ಳಿ ಚಂದ್ರಶೇಖರ್ ಅವರಿಗೆ, 'ಪೂರ್ಣಪ್ರಜ್ಞ ನಿರ್ದೇಶಕ' ಎಂಬ ಬಿರುದನ್ನು ನೀಡಿ ಗೌರವದಿಂದ ಸನ್ಮಾನಿಸಿದರು.