ಮುಂಬೈ, ಎ.08 (Daijiworld News/MB) : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಳೆಯ ವಿಡಿಯೋಗಳು ವೈರಸ್ ಆಗುತ್ತಿದ್ದು ಇದೀಗ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಹಳೆಯ ಡ್ಯಾನ್ಸ್ ವಿಡಿಯೋ ಒಂದು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿ ಜನಮನ ಗೆದ್ದಿದೆ.
![](https://daijiworld.ap-south-1.linodeobjects.com/iWeb/tvdaijiworld/img_tv247/mb-080420-ishu.jpg)
1997ರಲ್ಲಿ ಐಶ್ವರ್ಯಾ ರೈ ನಟನೆಯ ಸಿನಿಮಾ ಚಿತ್ರೀಕರಣಗೊಂಡಿದ್ದು ಬಿಡುಗಡೆಯಾಗಿರಲಿಲ್ಲ. ಇದೀಗ ಅದರಲ್ಲಿ ಐಶ್ವರ್ಯಾ ಡ್ಯಾನ್ಸ್ ಮಾಡುವ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಐಶ್ವರ್ಯಾ ನೃತ್ಯಕ್ಕೆ ಫಿದಾ ಆಗಿದ್ದಾರೆ.
ಈ ವಿಡಿಯೋ ಅನೀಸ್ ಬಾಸ್ಮಿ ನಿರ್ದೇಶನದ 'ರಾಧೇಶ್ಯಾಮ್ ಸೀತಾರಾಮ್' ಸಿನಿಮಾದಾಗಿದ್ದು 1997ರಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿತ್ತು. ಆದರೆ ಕಾರಣಾಂತರದಿಂದ ಈ ಸಿನಿಮಾ ಬಿಡುಗಡೆಯಾಗಿಲ್ಲ.
ಕರಾವಳಿ ಬೆಡಗಿ ಐಶ್ವರ್ಯಾಗೆ ಅಭಿನಯದ ಈ ಸಿನಿಮಾದಲ್ಲಿ ಕರಾವಳಿಯ ಸುನೀಲ್ ಶೆಟ್ಟಿ ನಾಯಕನಾಗಿ ನಟನೆ ಮಾಡಿದ್ದರು.