ಮುಂಬೈ, ಜೂ. 01 (Daijiworld News/MB) : ಕೊರೊನಾ ವೈರಸ್ ಲಾಕ್ಡೌನ್ ಇರುವ ಸಂದರ್ಭದಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ತನ್ನ ಸಹೋದರಿ ಅಲ್ಕಾ ಬಾಟಿಯಾ ಮತ್ತು ಆಕೆಯ ಮಕ್ಕಳಿಗಾಗಿ ವಿಶೇಷ ಚಾರ್ಟರ್ ವಿಮಾನವೊಂದನ್ನು ಬುಕ್ ಮಾಡಿದ್ದಾರೆ ಎಂಬ ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಅಕ್ಷಯ್ ಕುಮಾರ್ ಇದು ಸುಳ್ಳು ಸುದ್ದಿ ಎಂದು ಹೇಳಿದ್ದು ಇಂತಹ ಸುಳ್ಳು ವರದಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ತಂಗಿ ಮತ್ತು ಅವಳ ಇಬ್ಬರು ಮಕ್ಕಳಿಗಾಗಿ ವಿಶೇಷ ಚಾರ್ಟರ್ ವಿಮಾನವೊಂದನ್ನು ಬುಕ್ ಮಾಡಿರುವ ಸುದ್ದಿ ಸಂಪೂರ್ಣವಾಗಿ ಸುಳ್ಳಾಗಿದೆ. ಲಾಕ್ಡೌನ್ನಿಂದಾಗಿ ಆಕೆ ಎಲ್ಲಿಗೂ ಪ್ರಯಾಣ ಮಾಡಿಲ್ಲ ಹಾಗೂ ಆಕೆಗೆ ಇರುವುದು ಒಂದೇ ಮಗು!. ಇಂತಹ ಸುಳ್ಳು ಸುದ್ದಿಗಳ ವಿರುದ್ಧವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಹಿಂದೆ ಲಾಕ್ಡೌನ್ ನಡುವೆಯೂ ಅಕ್ಷಯ್ ಕುಮಾರ್ ಹಾಗೂ ಅವರ ಮಗುವನ್ನು ಸುರಕ್ಷಿತವಾಗಿ ತಮ್ಮ ಮನೆಗೆ ಕಳುಹಿಸಲು ಚಾರ್ಟರ್ ವಿಮಾನ ಬುಕ್ ಮಾಡಿದ್ದಾರೆ ಎಂದು ವರದಿಯಾಗಿತ್ತು.