ನವದೆಹಲಿ, ಜೂ 05 (DaijiworldNews/PY) : ಅತೀ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ 100 ಸೆಲೆಬ್ರಿಟಿಗಳನ್ನು ಒಳಗೊಂಡ ಪೋರ್ಬ್ಸ್ ವಾರ್ಷಿಕ ಪಟ್ಟಿ ಪ್ರಕಟವಾಗಿದ್ದು, ಈ ವರ್ಷವೂ ಕೂಡಾ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ.
52 ವರ್ಷದ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹಾಲಿವುಡ್ ದಿಗ್ಗಜ ವಿಲ್ ಸ್ಮಿತ್ ಅವರಂತಹ ನಟರನ್ನು ಹಿಂದಿಕ್ಕಿದ್ದಾರೆ. ವಿಲ್ ಸ್ಮಿತ್ 44.5 ಮಿಲಿಯನ್ ಡಾಲರ್ ಸಂಪಾದನೆಯೊಂದಿಗೆ 69ನೇ ಸ್ಥಾನದಲ್ಲಿದ್ದಾರೆ. 35.5 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ ಏಂಜಲೀನಾ ಜೋಲಿ 99ನೇ ಸ್ಥಾನದಲ್ಲಿದ್ದಾರೆ.
ಅದಾಗಿಯೂ ಕಳೆದ ವರ್ಷ ಕಳೆದ ವರ್ಷ 65 ಮಿಲಿಯನ್ ಡಾಲರ್ ಸಂಪಾದನೆಯೊಂದಿಗೆ 33 ಸ್ಥಾನದಲ್ಲಿದ್ದ ಅಕ್ಷಯ್ ಕುಮಾರ್ ಈ ವರ್ಷ ಅಂದಾಜು 48.5 ಮಿಲಿಯನ್ ಡಾಲರ್ನೊಂದಿಗೆ 52ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಬಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಅಕ್ಷಯ್ ಕುಮಾರ್ ಎಂದು ಪೋರ್ಬ್ಸ್ ಬಣ್ಣಿಸಿದೆ. ಅವರು ಕೊರೊನಾ ವಿರುದ್ದದ ಹೋರಾಟಕ್ಕಾಗಿ 4.5 ಮಿಲಿಯನ್ ಡಾಲರ್ ನೆರವು ನೀಡಿದ್ದಾರೆ.