ಮುಂಬೈ, ಜೂ. 06 (DaijiworldNews/MB) : ದಿ ವಾಲ್ ನನ್ನ ಫೇವರೇಟ್ ಕ್ರಿಕೆಟರ್ ಎಂದು ಹೇಳಿರುವ ಟಾಲಿವುಡ್, ಬಾಲಿವುಡ್ನ ನಟಿ ಪೂಜಾ ಹೆಗ್ಡೆ ತನ್ನ ಫೇವರೇಟ್ ಕ್ರಿಕೆಟರ್ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ.
ತನ್ನ ಅಭಿಮಾನಿಗಳು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ಪೂಜಾ ಹೆಗ್ಡೆ, ದಿ ವಾಲ್ ರಾಹುಲ್ ದ್ರಾವಿಡ್ ಅವರ ಅಭಿಮಾನಿ ನಾನು. ಯಾರೂ ಕೂಡಾ ರಾಹುಲ್ ಅವರಿಗೆ ಸಮನಾಗಿಲ್ಲ ಎಂದೆನಿಸುತ್ತದೆ. ಪ್ರಸ್ತುತ ಇರುವ ಆಟಗಾರರಲ್ಲಿ ಧೋನಿ, ಕೆಎಲ್ ರಾಹುಲ್ ಅವರು ನನಗೆ ಫೇವರೆಟ್. ಎಷ್ಟೇ ಬಿಝಿಯಾಗಿದ್ದರೂ ಕೂಡಾ ನಾನು ಕ್ರಿಕೆಟ್ ನೋಡುತ್ತೇನೆ. ತುಂಬಾ ಬಿಝಿಯಾಗಿ ಕ್ರಿಕೆಟ್ ನೋಡಲು ಸಾಧ್ಯವೇ ಆಗದಿದ್ದಲ್ಲಿ ಸ್ಕೋರ್ ಎಷ್ಟು ಎಂದಾದರೂ ತಿಳಿದು ಕೊಳ್ಳುತ್ತೇನೆ. ಕ್ರಿಕೆಟ್ ಎಂದರೆ ನನಗೆ ಬಹಳ ಇಷ್ಟ ಎಂದು ಹೇಳಿದ್ದಾರೆ.
ಇತ್ತೀಚೆಗೆ ಪಾಕ್ ಮಾಜಿ ಆಟಗಾರ ರಷೀದ್ ಲತೀಫ್ ಕೂಡ ರಾಹುಲ್ ದ್ರಾವಿಡ್ ಅವರನ್ನು ಶ್ಲಾಘಿಸಿದ್ದು ಹಲವರು ಆಟಗಾರರು, ನಟ ನಟಿಯರು ಇವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪೂಜಾ ಹೆಗ್ಡೆಯವರು ಕಳೆದ ವರ್ಷ, ಅರವಿಂದ ಸಮೇತ, ಗದ್ದಲಕೊಂಡ ಗಣೇಶ್ ಮೊದಲಾದ ಸಿನಿಮಾಗಳಲ್ಲಿ ಯಶಸ್ಸು ಪಡೆದಿದ್ದು 2020ರಲ್ಲಿ ಬಿಡುಗಡೆಯಾದ ಅವರ ಅಲಾ ವೈಕುಂಠಪುರಮುಲೋ ಸಿನಿಮಾ ಕೂಡಾ ಭಾರೀ ಯಶಸ್ಸಿಗೆ ಪಡೆದಿದೆ.