ಮುಂಬೈ, ಜೂ. 07 (DaijiworldNews/MB) : ಬಾಲಿವುಡ್ ನಿರ್ಮಾಪಕಿ ಎಕ್ತಾ ಕಪೂರ್ ಟ್ರಿಪಲ್ ಎಕ್ಸ್-2 ವೆಬ್ ಸಿರೀಸ್ನ ಕೆಲವೊಂದು ದೃಶ್ಯಕ್ಕೆ ಸಂಬಂಧಿಸಿ ಬಾರತೀಯ ಸೇನೆಗೆ ಅವಮಾನ ಮಾಡಲಾಗಿದೆ ಎಂದು ವಿವಾದ ಉಂಟಾಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ಬಳಿಕ ಈ ವೆಬ್ ಸಿರೀಸ್ನಲ್ಲಿರುವ ವಿವಾದಿತ ದೃಶ್ಯಗಳನ್ನು ಎಕ್ತಾ ಕಪೂರ್ ತೆಗೆದು ಹಾಕಿದ್ದಾರೆ.
ಈ ಬಗ್ಗೆ ತಿಳಿಸಿರುವ ಅವರು, ಭಾರತೀಯ ಸೇನೆ ಮೇಲೆ ನಮಗೂ ಅಪಾರ ಗೌರವವಿದೆ. ಅವರು ನಮ್ಮ ಕ್ಷೇಮ ಮತ್ತು ರಕ್ಷಣೆಗಾಗಿ ಮಾಡುವ ಸೇವೆ ಲೆಕ್ಕಕ್ಕೆ ಸಿಗದು. ಈಗ ವಿವಾದಕ್ಕೆ ಕಾರಣವಾಗಿರುವ ದೃಶ್ಯವನ್ನು ಅಳಿಸಿಹಾಕಲಾಗಿದೆ. ಆದರೆ ಟ್ರೋಲ್ ಮೂಲಕ ನಮ್ಮ ವಿರುದ್ಧವಾಗಿ ಕೆಟ್ಟದಾಗಿ ಕಮೆಂಟ್ ಹಾಗೂ ಬೆದರಿಕೆ ಹಾಕಲಾಗುತ್ತಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ವೆಬ್ ಸಿರೀಸ್ನಲ್ಲಿ ಸೇನಾಧಿಕಾರಿಯೊಬ್ಬರ ಪತ್ನಿಗೆ ಅಕ್ರಮ ಸಂಬಂಧವಿದ್ದು ಆ ದೃಶ್ಯದಲ್ಲಿ ಸೇನೆಯ ಸಮವಸ್ತ್ರ ಹರಿದಿರುತ್ತದೆ. ಇದು ಭಾರತೀಯ ಸೇನೆ ಮತ್ತು ಯೋಧರಿಗೆ ಮಾಡಿದ ಅವಮಾನ ಎಂದು ಆರೋಪ ಮಾಡಲಾಗಿದ್ದು ಈ ಬಗ್ಗೆ ಯೂ ಟ್ಯೂಬರ್ ವಿಕಾಸ್ ಪಾಠಕ್ ಗುರುಗ್ರಾಮ್ನಲ್ಲಿ ಎಕ್ತಾ ಕಪೂರ್ ಮತ್ತು ಅವರ ತಾಯಿ ಶೋಭಾ ಕಪೂರ್ ವಿರುದ್ಧ ದೂರು ನೀಡಿದ್ದರು. ಹಾಗೆಯೇ ಮಧ್ಯ ಪ್ರದೇಶದ ಇಂದೋರ್ನಲ್ಲಿ ಎಫ್ಐಆರ್ ಕೂಡಾ ದಾಖಲಾಗಿತ್ತು.
ಈ ಎಲ್ಲಾ ಬೆಳವಣಿಗೆಯ ಬಳಿಕ ಎಕ್ತಾ ಕಪೂರ್ ಟ್ರಿಪಲ್ ಎಕ್ಸ್-2 ವೆಬ್ ಸಿರೀಸ್ನಿಂದ ಕೆಲವೊಂದು ದೃಶ್ಯಗಳನ್ನು ತೆಗೆದು ಹಾಕಿದ್ದಾರೆ.