ಮುಂಬೈ, ಜೂ.09 (DaijiworldNews/MB) : ಸೋಮವಾರ ವಿಶ್ವ ಸಾಗರ ದಿನದ ಅಂಗವಾಗಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಬಿಕಿನಿ ತೊಟ್ಟು ತಿಮಿಂಗಿಲದೊಂದಿಗೆ ಈಜಿರುವ ವಿಡಿಯೋ ಪೋಸ್ಟ್ ಮಾಡಿದ್ದು ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ.
2016 ಫಿಲಿಪೈನ್ ಬೀಚಿನಲ್ಲಿ ತಿಮಿಂಗಿಲದ ಜೊತೆ ಈಜಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ಕತ್ರಿನಾ ಕೈಫ್, ನನ್ನ ಅಂತ್ಯಂತ ನಂಬಲಾಗದ ಸ್ನೇಹಿತನೊಂದಿಗೆ ಸಾಗರದಲ್ಲಿ ಒಂದು ಸುಂದರ ಕ್ಷಣ ಎಂದು ಬರೆದುಕೊಂಡಿದ್ದಾರೆ.
ಇನ್ನು ಸೋನಾಕ್ಷಿ ಸಿನ್ಹಾ ಕೂಡಾ ತಾವು ಈಜುವ ವಿಡಿಯೋ ಪೋಸ್ಟ್ ಮಾಡಿದ್ದು ನಮ್ಮ ದೈನಂದಿನ ಜೀವನದಲ್ಲಿ ಸಾಗರದ ಪ್ರಮುಖ ಪಾತ್ರವನ್ನು ನೆನಪಿಸಿಕೊಂಡು ಈ ಸಾಗರದ ದಿನವನ್ನು ಆಚರಿಸಬೇಕು. ಸಾಗರ ನಮ್ಮ ಭೂಮಿಯ ಶ್ವಾಸಕೋಶವಿದ್ದಂತಿದ್ದು ಅದು ನಮಗೆ ಹೆಚ್ಚಿನ ಆಮ್ಲಜನಕವನ್ನು ಒದಗಿಸುತ್ತವೆ. ಸಮುದ್ರದ ಸೌಂದರ್ಯ ಮತ್ತು ಸಂಪತ್ತನ್ನು ಒಟ್ಟಿಗೆ ಆಚರಿಸುವ ದಿನವಿದು ಎಂದು ಬರೆದುಕೊಂಡಿದ್ದಾರೆ.
ಈ ಇಬ್ಬರ ಜೊತೆಗೆ ಬಾಲಿವುಡ್ನ ಮತ್ತೋರ್ವ ನಟಿ ಭೂಮಿ ಪೆಡ್ನೇಕರ್ ಅವರು ಕೂಡ ವಿಶ್ವ ಸಾಗರ ದಿನದ ಅಂಗವಾಗಿ ಸಮುದ್ರದ ದಡದಲ್ಲಿ ನಿಂತು ಫೋಟೋಶೂಟ್ ಮಾಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.