ಬೆಂಗಳೂರು, ಜೂ.10 (DaijiworldNews/MB) : ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದು ಇದೀಗ ಅವರು ಹಳೆಯ, ಪೋಟೋ ಕಾಮೆಂಟ್ಗಳು ವೈರಲ್ ಆಗುತ್ತಿದೆ. ಈ ನಡುವೆ ನಟಿ ರಾಧಿಕಾ ಪಂಡಿತ್ ಫೋಟೋವೊಂದಕ್ಕೆ ಚಿರಂಜೀವಿ ಸರ್ಜಾ ಮಾಡಿರುವ ಕಾಮೆಂಟ್ ವೈರಲ್ ಆಗುತ್ತಿದ್ದು ನೆಟ್ಟಿಗರು ಇದನ್ನು ಓದಿ ಭಾವುಕರಾಗಿದ್ದಾರೆ.
ನಟಿ ರಾಧಿಕಾ ಪಂಡಿತ್ ಕಳೆದ ವರ್ಷ ಮಗಳು ಐರಾ ಜೊತೆಗಿನ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು ಈಕೆ ಹುಟ್ಟಿದ ದಿನ ನಾನೂ ಕೂಡ ಹುಟ್ಟಿದೆ. ಅಮ್ಮನಾಗಿ ಎಂದು ಬರೆದಿದ್ದಾರೆ. ಇದಕ್ಕೆ ಕಾಮೆಂಟ್ ಮಾಡಿರುವ ಚಿರು, ಇದು ತುಂಬಾ ನಿಜ, ಇದನ್ನು ಹೇಗೆ ವಿವರಿಸಬೇಕು ಎನ್ನುವುದು ನನಗೆ ತಿಳಿಯುತ್ತಿಲ್ಲ. ಆದರೆ ನಿಮ್ಮಿಬ್ಬರ ಬಗ್ಗೆ ನನಗೆ ಬಹಳ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಇದಕ್ಕೆ ಉತ್ತರಿಸಿರುವ ರಾಧಿಕಾ ಥ್ಯಾಂಕ್ಯೂ ಚಿರು. ಮುಂದಿನ ಸರದಿ ನಿಮ್ಮಿಬ್ಬರದು ಎಂದು ಹೇಳಿದ್ದು ಈ ಭಾವುಕ ಪೋಸ್ಟ್ ಈಗ ವೈರಲ್ ಆಗಿದೆ. ರಾಧಿಕಾ ಪೋಸ್ಟ್ಗೆ ಚಿರು ಕಾಮೆಂಟ್ ಮಾಡಿದ ಒಂದು ತಿಂಗಳ ಹಿಂದೆಯಷ್ಟೇ ಚಿರು ಹಾಗೂ ಮೇಘನಾ ವಿವಾಹವಾಗಿತ್ತು ಎಂದು ಹೇಳಲಾಗಿದೆ.
ಚಿರು ಅವರ ಪತ್ನಿ ಈಗ ಗರ್ಭಿಣಿಯಾಗಿದ್ದಾರೆ. ಆದರೆ ಮಗುವನ್ನು ನೋಡಲು ಚಿರು ಇಲ್ಲ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.