ಮುಂಬೈ, ಜೂ 11 (DaijiworldNews/PY) : ಕೊರೊನಾ ಭೀತಿ ಹಿನ್ನೆಲೆ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಧರಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಇದೀಗ ನಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಅನ್ಲಾಕ್ ಆಗಿದ್ದ ಕಾರಣ ದೇಶೀಯ ವಿಮಾನಗಳ ಹಾರಾಟಕ್ಕೆ ಷರತ್ತುಬದ್ದವಾದ ಅನುಮತಿ ನೀಡಲಾಗಿದ್ದು, ಹಾಗಾಗಿ ಪ್ರಯಾಣಿಕರು ಕೂಡಾ ಮುನ್ನೆಚ್ಚರಿಕಾ ಕ್ರಮಕೈಗೊಂಡು ಪ್ರಯಾಣ ಮಾಡುತ್ತಿದ್ದಾರೆ. ದಿಢೀರ್ ಲಾಕ್ಡೌನ್ ಜಾರಿಯಾದ ಕಾರಣದಿಂದ ಬಾಲಿವುಡ್ ತಾರೆಯರೂ ಕೂಡಾ ಇದ್ದ ಸ್ಥಳದಲ್ಲಿಯೇ ಲಾಕ್ ಆಗಿದ್ದು, ವಿಮಾನ ಸಂಚಾರಕ್ಕೆ ಅನುಮತಿ ದೊರೆತ ಹಿನ್ನೆಲೆಯಲ್ಲಿ ಪ್ರಯಾಣಿಸುತ್ತಿದ್ದಾರೆ.
ಮುಂಬೈನಿಂದ ನಟಿ ರಕುಲ್ ಕೂಡಾ ದೆಹಲಿಗೆ ತೆರಳಿದ್ದಾರೆ ಎಂದು ವರದಿಯಾಗಿದ್ದು, ಕೊರೊನಾ ಭೀತಿ ಹಿನ್ನೆಲೆ ರಕುಲ್ ಮನೆಯಿಂದಲೇ ಪಿಪಿಇ ಕಿಟ್, ಗ್ಲೌಸ್, ಮಾಸ್ಕ್ ಧರಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಬುಧವಾರ ರಕುಲ್ ಸಿಂಗ್ ಜಾಗಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿತ್ತು.