ಬೆಂಗಳೂರು, ಜೂ.13 (DaijiworldNews/MB) : ದಿಯಾ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಮಿಂಚಿದ ನಟ ಪೃಥ್ವಿ ಅಂಬರ್ ಈಗ ನವೀನ್ ದ್ವಾರಕನಾಥ್ ನಿರ್ದೇಶನದ "ಫಾರ್ ರಿಜಿಸ್ಟ್ರೇಷನ್" ಎಂಬ ಮತ್ತೊಂದು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡು ಸಹಿ ಹಾಕಿದ್ದು ಸರ್ಕಾರ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ.
ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಧಾರಾವಾಹಿ, ಸಿನಿಮಾಗಳ ಚಿತ್ರೀಕರಣ ಸ್ಥಗಿತವಾಗಿದ್ದು ಸಡಿಲಿಕೆಯಾದಂತೆ ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ದೇಶದಲ್ಲೀಗ ಲಾಕ್ಡೌನ್ ಸರಳೀಕರಣ ಮಾಡಲಾಗಿದ್ದು ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದ್ದಾರೆ ಶೂಟಿಂಗ್ ಆರಂಭಿಸುವ ಸಾಧ್ಯತೆಯಿದೆ.
ಹೊಸ ವಾಹನ ಖರೀದಿಸಿದಾಗ ವಾಹನದ ಮುಂಭಾಗದಲ್ಲಿ ಹಾಕಲಾಗುವ ಫಾರ್ ರಿಜಿಸ್ಟ್ರೇಷನ್ ಎನ್ನುವ ಬೋರ್ಡ್ ಹೆಸರಿನಲ್ಲಿ ಈ ಸಿನಿಮಾ ಸೆಟ್ಟ್ ಏರಲು ಮುಂದಾಗಿದ್ದು ಈ ಸಿನಿಮಾದ ಚಿತ್ರೀಕರಣವನ್ನು ಸಕಲೇಶಪುರ, ಮಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಸಲು ಯೋಜಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಈ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿರುವ ನಿರ್ದೇಶನ ನವೀನ್ ಅವರೇ ಈ ಸಿನಿಮಾವನ್ನು ರಚಿಸಿದ್ದಾರೆ.
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಮಧ್ಯಮವರ್ಗದ ಹುಡುಗನಾಗಿ ನಟ ಪೃಥ್ವಿ ಅಂಬರ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು ಮಾವನಾಗಿ ತಬಲನಾಣಿ ಸಾಥ್ ನೀಡಲಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕಿ ಸೇರಿದಂತೆ ಇತರ ಪಾತ್ರಗಳಿಗೆ ಇನ್ನಷ್ಟೇ ಆಯ್ಕೆ ನಡೆಯಬೇಕಾಗಿದೆ.
ಆರ್. ಹರೀಶ್ ಆರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು ಭರ್ಜರಿ ಚೇತನ್ ಕುಮಾರ್ ಶೀರ್ಷಿಕೆ ಗೀತೆಗೆ ಸಾಹತ್ಯ ರಚಿಸಿದ್ದಾರೆ. ನವೀನ್ ರಾವ್ ನಿಶ್ಚಲ್ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದಾರೆ.