ಬೆಂಗಳೂರು, ಜೂ.14 (DaijiworldNews/MB) : ನನ್ನ ಸಿನಿಮಾ ಜೀವನದಲ್ಲಿ ಏಳು-ಬೀಳು ಎರಡೂ ಇದೆ. ನನ್ನ ತಪ್ಪುಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅದರ ಅರಿವಾಗಿದೆ. ಹಾಗಾಗಿ ಮಾಡಿದ ತಪ್ಪನ್ನೇ ನಾನು ಮತ್ತೆ ಮಾಡೋದಿಲ್ಲ ಎಂದು ನಟಿ ಶುಭಾ ಪೂಂಜಾ ಹೇಳಿದ್ದಾರೆ.
ಪತ್ರಿಕೆಯೊಂದರಲ್ಲಿ ಮಾತನಾಡಿರುವ ಅವರು, ಕಾಂಟ್ರವರ್ಸಿಗಳಿಗೆಲ್ಲಾ ನಾನು ತುಂಬ ಫೇವರಿಟ್ ಎಂದು ಭಾವಿಸುತ್ತಿದ್ದೆ. ಹಾಗೆಯೇ ನನ್ನ ಬಗ್ಗೆ ಗಾಸಿಪ್ ಹಬ್ಬಿದಾಗ ನಾನು ಬಹಳ ಬೇಸರ ಮಾಡಿಕೊಳ್ಳುತ್ತಿದ್ದೆ. ಆದರೆ ಈಗ ಅದನ್ನು ಹೇಗೆ ಡೀಲ್ ಮಾಡಬೇಕು ಎಂಬುದನ್ನು ಕಲಿತ್ತಿದ್ದೇನೆ ಎಂದಿದ್ದಾರೆ.
ಸೆಲೆಬ್ರೆಟಿಯಾದಾಗ ಅವರ ಬಗ್ಗೆ ಜನರು ಬೇರೆ ಬೇರೆ ರೀತಿಯಲ್ಲಿ ಮಾತನಾಡುವುದು ಸಾಮಾನ್ಯ. ಆ ಕಾರಣಕ್ಕೆ ನಾನು ಅವರನ್ನು ದೂರುವುದಿಲ್ಲ. ಆದರೆ ಅದನ್ನು ನಾನು ಹೇಗೆ ಸ್ವೀಕರಿಸಿ ನಿಬಾಯಿಸಬೇಕು ಎಂದು ಕಲಿಯಬೇಕಾಗಿದೆ ಎಂದು ಹೇಳಿದ್ದಾರೆ.