ಬೆಂಗಳೂರು, ಜೂ.15 (DaijiworldNews/MB) : ಮಂಗಳೂರು ಬೆಡಗಿ, ಮೊಗ್ಗಿನ ಮನಸು ಖ್ಯಾತಿ ನಟಿ ಶುಭಾ ಪೂಂಜಾ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ.
ನಟಿ ಶುಭಾ ಪೂಂಜಾ ಅವರು ಜಯಕರ್ನಾಟಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲೆ ವಿಭಾಗದ ಉಪಾಧ್ಯಕ್ಷ, ಉದ್ಯಮಿ ಸುಮಂತ್ ಮಹಾಬಲ ಅವರನ್ನು ವಿವಾಹವಾಗಲು ನಿರ್ಧರಿಸಿದ್ದು ಈ ಇಬ್ಬರೂ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಇವರಿಬ್ಬರ ವಿವಾಹ ಮಂಗಳೂರಿನಲ್ಲಿ ನೆರವೇರಲಿದ್ದು ಆರತಕ್ಷತೆ ಬೆಂಗಳೂರಿನಲ್ಲಿ ನಡೆಯಲಿದೆ. ಡಿಸೆಂಬರ್ನಲ್ಲಿ ವಿವಾಹವಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಶುಭಾ ಪೂಂಜಾ ಕನ್ನಡದಲ್ಲಿ ಸುಮಾರು 20ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ.